ಪೇಮೆಂಟ್ ಗೇಟ್ ವೇಗೆ ಕನ್ನ, ಆರೋಪಿ ಸೆರೆ

arrest (7)
Published on

ಬೆಂಗಳೂರು: ಪೇಮೆಂಟ್ ಗೇಟ್ ವೇ ಪ್ಲಾಟ್‌ಾರ್ಮ್ ಕಂಪನಿಗೆ ವಂಚನೆ ಮಾಡಿದ್ದ ಸೈಬರ್ ಕಳ್ಳನನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ನಿತೀಶ್ ಯಾದವ್ (26) ಬಂಧಿತ. ಈತ ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿಗೆ 15.58 ಲಕ್ಷ ರೂ. ವಂಚನೆ ಮಾಡಿದ್ದ. ಈ ಮೇರೆಗೆ ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪತ್ತೆಗೆ ಬಲೆಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ‘ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಪೇಮೆಂಟ್ ಗೇಟ್ ವೇ ವೇದಿಕೆ ಸೃಷ್ಟಿಸಿ ಸೇವೆ ಸಲ್ಲಿಸುತ್ತಿದೆ. ಈ ಕಂಪನಿ ಜತೆಗೆ ಆರೋಪಿಗಳು ‘ಸಿವೈಸಿಎನ್’ ಎಂಬ ನಕಲಿ ಕಂಪನಿ ಹೆಸರನ್ನು ನೋಂದಣಿ ಮಾಡಿಸಿದ್ದರು. ಐಐಟಿ, ಜೆಇಇ ಮತ್ತು ನೀಟ್‌ಗೆ ಆನ್‌ಲೈನ್‌ನಲ್ಲಿ ತರಗತಿ ಮತ್ತು ಪಠ್ಯಪುಸ್ತಕ ಒದಗಿಸುವುದಾಗಿ ಹೇಳಿಕೊಂಡಿದ್ದರು. ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಕೋಚಿಂಗ್ ಬಗ್ಗೆ ಜಾಹೀರಾತು ನೀಡಿದ್ದರು. ಮತ್ತೆ ವಿದ್ಯಾರ್ಥಿಗಳ ಹೆಸರಿನಲ್ಲಿ ಸಿವೈಸಿಎನ್‌ನಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿ 2 ಲಕ್ಷ ರೂ. ಶುಲ್ಕ ತುಂಬಿದ್ದರು. ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ತನಗೆ ಬಂದ ಹಣವನ್ನು ಆರೋಪಿಗಳ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು.

ಆರೋಪಿಗಳೇ ನಾನಾ ಹೆಸರಿನಲ್ಲಿ ವಿದ್ಯಾರ್ಥಿಗಳೆಂದು ಸುಳ್ಳು ಹೇಳಿ ನೋಂದಣಿ ಮಾಡಿಕೊಂಡು ಹಣ ತುಂಬುತ್ತಿದ್ದರು. ಪೇಮೆಂಟ್ ಗೇಟ್ ವೇ ಕಂಪನಿ ಒಪ್ಪಂದದ ಪ್ರಕಾರ, ಕಮಿಷನ್ ಹಿಡಿದು ವಾಪಸ್ ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು. ಇದಾದ ಮೇಲೆ ವಿದ್ಯಾರ್ಥಿಗಳ ಹೆಸರಿನಲ್ಲಿ ದೂರು ಸಲ್ಲಿಸುತ್ತಿದ್ದರು. ಐಐಟಿ, ಜೆಇಇ ಮತ್ತು ನೀಟ್ ಸಂಬಂಧ ಯಾವುದೇ ಆನ್‌ಲೈನ್ ತರಗತಿ ನಡೆಸುತ್ತಿಲ್ಲ. ನಮಗೆ ಪಠ್ಯಪುಸ್ತಕಗಳು ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸುತ್ತಿದ್ದರು. ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ನೇರ ಗ್ರಾಹಕರ (ವಿದ್ಯಾರ್ಥಿಗಳು) ಬ್ಯಾಂಕ್ ಖಾತೆಗೆ ರೀಂಡ್ ಮಾಡಿ ಬಳಿಕ ತಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಆರೋಪಿಗಳ ಕಂಪನಿಗೆ ರೀಂಡ್ ಮಾಡುವಂತೆ ಸೂಚಿಸುತ್ತಿದ್ದರು. ಆದರೆ, ಒಪ್ಪಂದದ ಪ್ರಕಾರ ಹಣ ಕಳುಹಿಸದೆ ಆರೋಪಿಗಳು ವಂಚನೆ ಮಾಡುತ್ತಿದ್ದರು.

ಇದೇ ರೀತಿಯಾಗಿ 8 ವಿದ್ಯಾರ್ಥಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ರಿಂಡ್ ಮಾಡಿಕೊಂಡಿದ್ದರು. ಈ ಬಗ್ಗೆ ಅನುಮಾನ ಬಂದು ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ದೂರು ಸಲ್ಲಿಸಿತ್ತು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸಿಪಿ ಡಾ.ಗೋವರ್ಧನ್ ಗೋಪಾಲ್, ಇನ್‌ಸ್ಪೆಕ್ಟರ್ ಪಿ.ಎನ್. ಈಶ್ವರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಸುಳಿವು ಕೊಟ್ಟ ಟೆಕ್ನಿಕಲ್ ಸಾಕ್ಷ್ಯಗಳು

ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದ ಸಿವೈಸಿಎನ್ ಕಂಪನಿ ಒಂದೇ ಡೆಬಿಟ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಮತ್ತು ಐಪಿ ಅಡ್ರಸ್ ಬಳಸಿಕೊಂಡು ವಿದ್ಯಾರ್ಥಿಗಳ ಹೆಸರಿನಲ್ಲಿ ಶುಲ್ಕ ತುಂಬುತ್ತಿದ್ದರು. ದೂರುದಾರ ಕಂಪನಿಯಿಂದ ವಾಪಸ್ ಇವೇ ಬ್ಯಾಂಕ್ ಖಾತೆಗಳಿಗೆ ರಿಂಡ್ ಮಾಡಿಸಿಕೊಳ್ಳುತ್ತಿದ್ದರು. ಎಲ್ಲವೂ ಒಂದೇ ವಿಳಾಸದಲ್ಲಿ ನಾನಾ ಹೆಸರಿನಲ್ಲಿ ಆಗುತ್ತಿದ್ದ ಅಕ್ರಮದಿಂದ ಅನುಮಾನದಿಂದ ವಂಚನೆ ಬೆಳಕಿಗೆ ಬಂದಿದೆ.

ಬಿಎಸ್ಸಿ ಓದಿದ್ದ ನಿತೇಶ್ ಯಾದವ್ ಮತ್ತು ತಲೆಮರೆಸಿಕೊಂಡಿರುವ ಈತನ ಸ್ನೇಹಿತ ಬಿಇ ಓದಿದ್ದ. ಖಾಸಗಿ ಕಂಪನಿಯಲ್ಲಿ ನೌಕರಿಗೆ ಸೇರಿ ಅಲ್ಲಿ ಬರುತ್ತಿದ್ದ ವೇತನ ಸಾಕಾಗುವುದಿಲ್ಲ ಎಂದು ಪೇಮೆಂಟ್ ಗೇಟ್ ವೇ ವಂಚನೆಗೆ ಇಳಿದಿದ್ದರು. ಹರಿಯಾಣದ ಗುರುಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ್ಲ್ಯಾಟ್ ಬಾಡಿಗೆಗೆ ಪಡೆದು ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಇದ್ದಲಿಗೇ ಊಟ, ಬಟ್ಟೆ ಪಾರ್ಸೆಲ್ ತರಿಸಿಕೊಳ್ಳುತ್ತಿದ್ದರು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ದಯಾನಂದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net