ಚಿನ್ನದ ಬೇಟೆಯ ಹಿಂದೆ ಪರಿಶ್ರಮದ ಹಾದಿ

rank
ಕುವೆಂಪು ವಿವಿಯ ಘಟಿಕೋತ್ಸವದಲ್ಲಿ 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದ ಬಿ.ಜೆ.ವಸಂತಕುಮಾರ್, ಆರು ಸ್ವರ್ಣ ಪದಕಕ್ಕೆ ಕೊರಳೊಡ್ಡಿದ ಸಾನಿಯಾ ಫಿರ್ದೋಸ್, ಐದು ಸ್ವರ್ಣ ಪದಕ ಗಳಿಸಿದ ಶುಭಶ್ರೀ, ನಾಲ್ಕು ಚಿನ್ನದ ಪದಕ ಪಡೆದ ಆರ್.ಅರ್ಪಿತಾ ಹಾಗೂ ಧನುರ್ವಿ.
Published on

ಶಿವಮೊಗ್ಗ: ಕುವೆಂಪು ವಿವಿ ಘಟಿಕೋತ್ಸವದಲ್ಲಿ 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪ ಭೈರನಮಕ್ಕಿಯ ಬಿ.ಜೆ.ವಸಂತಕುಮಾರ್ ಹಾಗೂ ಆರು ಸ್ವರ್ಣ ಪದಕ ಗಳಿಸಿದ ಭದ್ರಾವತಿಯ ಸಾನಿಯಾ ಫಿರ್ದೋಸ್ ಕಡುಬಡತನದ ನಡುವೆ ವಿಚಲಿತರಾಗದೆ ಸಾಧನೆಯ ಕನಸನ್ನು ನನಸಾಗಿಸಿಕೊಂಡವರು.

ಪ್ರಸ್ತುತ ಕೊಪ್ಪ ತಾಲೂಕಿನ ಜಯಪುರ ಬಿಜಿಎಸ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಜೆ.ವಸಂತಕುಮಾರ್ ತಂದೆ ಜಗದೀಶ್ ಕುಟುಂಬ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಮನೆಕೆಲಸ ಮಾಡಿಕೊಂಡಿದ್ದಾರೆ. ವಸಂತಕುಮಾರ್ ಅವರ ಅಜ್ಜ ಕುವೆಂಪು ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದರು. ಇದರಿಂದ ಪ್ರೇರಣೆ ಪಡೆದ ಅವರು ಕೂಡ ಕನ್ನಡ ಎಂಎ ಆಯ್ದುಕೊಂಡಿದ್ದರು. ಈಗ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ.

ಎಂಎಸ್ಸಿ ಪರಿಸರ ವಿಜ್ಞಾನ ವಿಭಾಗದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದಿರುವ ಸಾನಿಯಾ ಫಿರ್ದೋಸ್ ಭದ್ರಾವತಿಯವರು. ಇವರ ತಂದೆ ಅಮಿನ್ ಉರ್ ರೆಹಮಾನ್ ಕೂಲಿ ಕೆಲಸ ಮಾಡಿದರೆ ತಾಯಿ ಹಸೀನಾ ಮನೆ ಕೆಲಸ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೆ ಮಗಳು ಸಂಶೋಧನೆಯಲ್ಲಿ ತೊಡಗಿಕೊಳ್ಳಲಿ ಎಂಬ ಆಸೆ.

ಎಟಿಎನ್‌ಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಜಿ.ಹರ್ಷಿತಾ ಐದು ಚಿನ್ನದ ಪದಕ ಗಳಿಸಿದ್ದಾರೆ. ಇವರ ತಂದೆ ವಿಐಎಸ್‌ಎಲ್‌ನಲ್ಲಿ ಗುತ್ತಿಗೆ ಕಾರ್ಮಿಕ. ತಾಯಿ ಯಶೋದಾ ಗೃಹಿಣಿ. ನಾನು ಒಂದು ಚಿನ್ನದ ಪದಕ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಐದು ಸ್ವರ್ಣ ಪದಕಗಳು ಬಂದಿರುವುದು ಖುಷಿಯ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net