ಪ್ರಜ್ವಲ್ ಪೋಟೋ ಅಂಟಿಸಿದವ ಸೆರೆ

prajwal
Published on

ಬೆಂಗಳೂರು: ಹಾಸನ ಲೈಂಗಿಕ ಹಗರಣ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ (48) ಬಂಧಿತ. ಲೈಂಗಿಕ, ಮಾನಸಿಕ ದೌರ್ಜನ್ಯ ಮತ್ತು ಪೆನ್‌ಡ್ರೈವ್ ಹಗರಣದ ಪ್ರಮುಖ ಆರೋಪಿ ಎಂದು ಪ್ರಜ್ವಲ್ ರೇವಣ್ಣ ಪೋಟೋ ಹೊಂದಿದ್ದ ಪೋಸ್ಟರ್ ಅನ್ನು ಕುಮಾರಕೃಪ ಬಳಿಯ ರೈಲ್ವೆ ಸಮಾಂತರ ರಸ್ತೆಯ ಹಲವೆಡೆ ಅಂಟಿಸಿ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಮತ್ತು ಸನ್ಮಾನಿಸಿ ಗೌರವಿಸುವುದಾಗಿ ಪ್ರಚಾರ ಮಾಡುತ್ತಿದ್ದರು.

ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಆರೋಪಿ ನಾಗೇಶ್ ಪೋಸ್ಟರ್ ಅಂಟಿಸುವಲ್ಲಿ ತೊಡಗಿದ್ದರು. ಹೊಯ್ಸಳ ಸಿಬ್ಬಂದಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net