ಈಕೆ ಫೈಜರ್ ಕರೊನಾ ಲಸಿಕೆ ಪಡೆದ ಜಗತ್ತಿನ ಮೊದಲ ವ್ಯಕ್ತಿ; ಜನ್ಮದಿನಕ್ಕೆ ಒಂದು ವಾರ ಮೊದಲು ಲಸಿಕೆಯೇ ಕೊಡುಗೆ

Collage 1
Published on

ಬ್ರಿಟನ್​: ಕೋವಿಡ್​-19 ವಿರುದ್ಧ ಜಗತ್ತಿನ ಹಲವು ಕಂಪನಿಗಳು ಸಂಶೋಧನೆ ಹಾಗೂ ಪ್ರಯೋಗಗಳಲ್ಲಿ ತೊಡಗಿದ್ದು, ಆ ಪೈಕಿ ಫೈಜರ್ ಕಂಪನಿ ಕೂಡ ಪ್ರಮುಖವಾದುದು. ಈಗಾಗಲೇ ಪ್ರಯೋಗದಲ್ಲಿ ತೊಡಗಿರುವ ಈ ಕಂಪನಿ ತನ್ನ ಮೊದಲ ಲಸಿಕೆಯನ್ನೂ ನೀಡಿದೆ.

ವಿಶೇಷವೆಂದರೆ ಫೈಜರ್ ಕಂಪನಿಯ ಮೊದಲ ಲಸಿಕೆಯನ್ನು 90 ವರ್ಷದ ಮಹಿಳೆಯೊಬ್ಬರು ಪಡೆದಿದ್ದು, ಅವರು ಈ ಲಸಿಕೆ ಪಡೆದ ಜಗತ್ತಿನ ಪ್ರಪ್ರಥಮ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ಲಂಡನ್​ನಲ್ಲಿ ಶುಶ್ರೂಷಕಿ ಆಗಿರುವ ಮಾರ್ಗರೆಟ್​ ಕೀನಾ ಮಂಗಳವಾರ ಮುಂಜಾನೆ ಈ ಲಸಿಕೆ ಪಡೆದಿದ್ದಾರೆ. ಮುಂದಿನ ವಾರ 91 ವರ್ಷಕ್ಕೆ ಪದಾರ್ಪಣೆ ಮಾಡಲಿರುವ ಇವರು, 'ಇದು ಈ ಸಲದ ಜನ್ಮದಿನದ ಮುಂಗಡ ಕೊಡುಗೆ' ಎಂದು ಹೇಳಿಕೊಂಡಿದ್ದಾರೆ.

ಫೈಜರ್ ಮತ್ತು ಬಯಾಂಟೆಕ್​ ಕಂಪನಿಗಳು ಜತೆಯಾಗಿ ಈ ಲಸಿಕೆಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿವೆ. ಬ್ರಿಟನ್​ನ ಮೆಡಿಸಿನ್ಸ್​ ಆ್ಯಂಡ್ ಹೆಲ್ತ್​ಕೇರ್​ ಪ್ರಾಡಕ್ಟ್ಸ್​ ರೆಗ್ಯುಲೇಟರಿ ಏಜೆನ್ಸಿ (ಎಂಎಚ್​ಆರ್​ಎ) ಫೈಜರ್​-ಬಯಾಂಟೆಕ್​ ಕಂಪನಿಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಫೈಜರ್​ನ ಮೊದಲ ಕ್ಲಿನಿಕಲ್ ಟ್ರಯಲ್​ನಲ್ಲಿ ಮಾಹಿತಿ ಪ್ರಕಾರ ಈ ಲಸಿಕೆ 23 ದಿನಗಳಲ್ಲಿ ಶೇ. 95 ನಿರೋಧಕ ಶಕ್ತಿ ನೀಡಲು ಸಮರ್ಥವಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net