

ವಿರಾಜಪೇಟೆ: ಕೊಡವ ಕುಟುಂಬಗಳ ಮಧ್ಯೆ ಕೊಡಗು ಕಪ್ ಹೆಸರಿನಲ್ಲಿ 13ನೇ ವರ್ಷದ ಕೌಟುಂಬಿಕ ಗಾಲ್ಫ್ ಪಂದ್ಯವು ಪ್ರಸ್ತುತ ಕಣರ್ಂಡ ಕುಟುಂಬ(ಒಕ್ಕ) ಆಯೋಜಿಸಿದ್ದು ಎರಡು ದಿನಗಳು ನಡೆದ ಗಾಲ್ಫ್ ಪಂದ್ಯಗಳು ಅಭೂತಪೂರ್ವ ಯಶಕಂಡು ಕೊನೆಗೊಡಿತು.
ಕಣರ್ಂಡ ಒಕ್ಕ ಕೊಡಗು ಕೌಟುಂಬಿಕ ಗಾಲ್ಫ್ ಪಂದ್ಯ-2025, ವಿರಾಜಪೇಟೆ ಹೊರವಲಯದ ಕೂರ್ಗ್ ಗಾಲ್ಫ್ ಲಿಂಕ್ ಅಂಬಟ್ಟಿ ಗ್ರಾಮದ ಹುಲ್ಲುಹಾಸಿನ ಗಾಲ್ಫ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎರಡು ದಿನಗಳವರೆಗೆ ನಡೆಯಿತು.
ಕಣರ್ಂಡ ಕುಟುಂಬದ ಆಯೋಜಕರಾದ ಅಪ್ಪಣ್ಣ ಮತ್ತು ಬೋಪಣ್ಣ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದ್ದ ಅವರು ಸಮಾರೋಪ ಸಮಾರಂಭದಲ್ಲೂ ಭಾಗಿಯಾಗಿ ಮಾತನಾಡಿ, ಕುಟುಂಬದ ಹಿರಿಯರಾದ ಬೊಳ್ಳಮ್ಮ ಅವರು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯು ಮೊತ್ತಮೊದಲ ಬಾರಿಗೆ ಕೊಡವ ಕುಟುಂಬಗಳ ಮಧ್ಯೆ ಆಯೋಜನೆಗೊಂಡಿತ್ತು. ಇದೀಗ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಹಗ್ಗಜಗ್ಗಾಟ, ಹೀಗೆ ಮುಂದುವರಿದು ಪ್ರತಿಷ್ಠಿತ ಕ್ರೀಡೆಯಾದ ಗಾಲ್ಫ್ ಕ್ರೀಡೆ ಸೇರ್ಪಡೆಗೊಂಡು ಸುಮಾರು 13 ವರ್ಷಗಳ ಹೊಸ್ತಿಲಲ್ಲಿದೆ. ಕುಟುಂಬಗಳ ಮಧ್ಯೆ ನಡೆಯುವ ಕ್ರೀಡೆಗಳಿಂದ ಸಂಬಂಧಗಳು ಗಾಢವಾಗಿ ವೃದ್ಧಿಸುತ್ತದೆ. ಹಿರಿಯ, ಕಿರಿಯ, ಸಿರಿತನ, ಬಡತನ ಎಂಬ ಭೇದ-ಭಾವಗಳು ಅಳಿಸಿ ಸಹೋದರತ್ವದ ಚಿಂತನೆಯು ಜಾಗೃತವಾಗುತ್ತದೆ ಎಂದ ಅವರು, ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾ ಪಟುಗಳಿಗೆ ಶುಭ ಕೋರಿದರು.
ಕೂರ್ಗ್ ಗಾಲ್ಫ್ ಲಿಂಕ್ ನ ಕ್ಯಾಪ್ಟನ್ ಭರತ್ ಮಂದಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಪಂದ್ಯಕ್ಕೆ ಸಹಕರಿಸಿದ ದಾನಿಗಳು, ಕಂಪನಿಗಳು, ಪ್ರಾಯೋಜಕರು ಹಾಗೂ ಕ್ರೀಡಾಪಟುಗಳಿಗೆ ಧನ್ಯವಾದ ತಿಳಿಸಿದರು. ಆಯೋಜಕ ಕಣರ್ಂಡ ಕುಟುಂಬದ ಪ್ರಮುಖರಾದ ಡಾ.ಬೋಪಣ್ಣ ಮಾತನಾಡಿದರು.
ಗಾಲ್ಫ್ ಕ್ರೀಡೆಯ ಆಯೋಜಕರಾದ ಕಣರ್ಂಡ ಕುಟುಂಬದ ಹಿರಿಯ, ಕಿರಿಯ ಸದಸ್ಯರು, ಕೂರ್ಗ್ ಗಾಲ್ಫ್ ಲಿಂಕ್ ಅಂಬಟ್ಟಿ ಯ ಪದಾಧಿಕಾರಿಗಳು, ಆಟಗಾರರು, ಪ್ರಯೋಜಕರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.
ಗೆದ್ದವರ ವಿವರ: ಕಣರ್ಂಡ ಕುಟುಂಬ ಆಯೋಜಕತ್ವದಲ್ಲಿ ವಿರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಬಟ್ಟಿ ಗ್ರಾಮದ ಕೂರ್ಗ್ ಗಾಲ್ಫ ಲಿಂಕ್ ಹುಲ್ಲು ಹಾಸು ಕ್ರೀಡಾಂಗಣದಲ್ಲಿ ನಡೆಯಿತು. ಚಾಂಪಿಯನ್‌ಷಿಪ್ ತಂಡ ಗ್ರಾಸ್ ಸ್ಟ್ರೋಕ್ ಪ್ಲೇ-ಪ್ರಥಮ ರಂಜಿತ್ ಕೆ.ಪಿ. ಮತ್ತು ಗಣೇಶ್ ಮಹೀಂದ್ರ ಜೋಡಿ- 165 ಗ್ರಾಸ್, ದ್ವೀತಿಯ-ಅಮೋಗ್ ದೇವಯ್ಯ ಮತ್ತು ಆಯೂಷ್ ಕಾರ್ಯಪ್ಪ ಜೋಡಿ 171 ಗ್ರಾಸ್ ( ನಡಿಕೇರಿಯಂಡ ಕುಟುಂಬ). ಚಾಂಪಿಯನ್‌ಷಿಪ್ ತಂಡ ಹ್ಯಾಂಡಿಕ್ಯಾಪ್ ಸ್ಟ್ರೋಕ್ ಪ್ಲೇ (0-18). ಪ್ರಥಮ- ಪಿ.ಬಿ. ಚೆಂಗಪ್ಪ ಮತ್ತು ದೇವ್ ಉತ್ತಪ್ಪ 151 ನೆಟ್ (ಪಟ್ಟಡ ಕುಟುಂಬ). ದ್ವೀತಿಯ-ಜೀವನ್ ಬೆಳ್ಯಪ್ಪ ಮತ್ತು ಅಖಿಲ್ ಮುತ್ತಣ್ಣ 152 ನೆಟ್ (ಪಾಲೆಕಂಡ ಕುಟುಂಬ)
ವೈಯಕ್ತಿಕ-ಸ್ಟ್ರೋಕ್ ಪ್ಲೇ: ಪ್ರಥಮ-ಮುಕ್ಕಾಟೀರ ಪೂವಯ್ಯ 78 ಗ್ರಾಸ್. ದ್ವೀತಿಯ-ನಾಪಂಡ ತಿಮ್ಮಯ್ಯ 82 ಗ್ರಾಸ್, ವೈಯಕ್ತಿಕ- ಹ್ಯಾಂಡಿಕ್ಯಾಪ್ ಸ್ಟ್ರೋಕ್ ಪ್ಲೇ (0-18): ಅಜಯ್ ಅಯ್ಯಪ್ಪ ಪಿ.ಎಸ್. 72 ನೆಟ್. ದ್ವೀತಿಯ-ಸಂಜಯ್ ಡಿಸೋಜಾ 74 ನೆಟ್, ವೈಯಕ್ತಿಕ-ಹ್ಯಾಂಡಿಕ್ಯಾಪ್ ಸ್ಟೇಬಲ್‌ಪೋರ್ಡ್ 19-24): ಪ್ರಥಮ-ಸಿ.ಸಿ.ತಿಮ್ಮಯ್ಯ 37 ಅಂಕಗಳು, ದ್ವೀತಿಯ-ಮೇಜರ್ ಬಿ.ಎ. ನಂಜಪ್ಪ 35 ಅಂಕಗಳು.
ವೈಯಕ್ತಿಕ-ಹ್ಯಾಂಡಿಕ್ಯಾಪ್ ಸ್ಟ್ರೋಕ್ ಪ್ಲೇ ಆಹ್ವಾನಿತರ ವಿಭಾಗ: ಪ್ರಥಮ-ಅಜಯ್ ವಿಜ್ 74 ನೆಟ್ , ದ್ವೀತಿಯ-ಸಶಾಂಕ್ ಭಂಟ್ವಾಳ 76 ನೆಟ್, ಹ್ಯಾಂಡಿಕ್ಯಾಪ್ ಸ್ಟೇಬಲ್ ಫೋರ್ಡ್ ಹಿರಿಯರ ವಿಭಾಗ (0-24): ಎಂ.ಎ. ಪೊನ್ನಣ್ಣ 32 ಅಂಕಗಳೊಂದಿಗೆ ವಿಜೇತರಾದರು, ಅತ್ಯುತ್ತಮ ಮಹಿಳಾ ಗಾಲ್ಫರ್ -ಹ್ಯಾಂಡಿಕ್ಯಾಪ್ ಸ್ಟೇಬಲ್ ಫೋರ್ಡ್ ವಿಭಾಗ (0-24) ಎಂ.ಎಸ್ ಮಿರ್ನಾಲಿನಿ ಚಿನ್ನಪ್ಪ 29 ಅಂಕಗಳೊಂದಿಗೆ ವಿಜೇತರಾದರು. ನೇರ ಡ್ರೈವ್ ವಿಭಾಗ: ಸ್ಮರನ್ ಸುಭಾಷ್,
ಪಿನ್‌ಗೆ ಹತ್ತಿರ: ಸಿ.ಪಿ.ಗಣಪತಿ, ಸೆಕೆಂಡ್ ಶಾಟ್ ಪಿನ್‌ಗೆ ಹತ್ತಿರ: ಅಜಯ್ ವಿಜ್, ಅತ್ಯುತ್ತಮ 5 ಪಿನ್ ಹತ್ತಿರ ವಿಭಾಗದಲ್ಲಿ: ಮಾಚಯ್ಯ ಕೆ.ಎಸ್. 4 ಅಡಿ, ದಿನೇಶ್ ಕಾರ್ಯಪ್ಪ 6 ಅಡಿ, ವರುಣ್ ಗಣಪತಿ 9 ಅಡಿ, ಕೋದಂಡ ರಾಮ್ 12 ಅಡಿ, ಸುಭಾಷ್ ಬಲ್ಲಚಂಡ 13 ಅಡಿ ಅಂತರದಲ್ಲಿ ಗುರಿ ಮುಟ್ಟಿದರು. ಸ್ಫರ್ಧೆ ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.