ಹಾರರ್​ ವೀಕ್ಷಿಸುವ ಪ್ರೇಕ್ಷಕರಿಗೆಂದೇ ತಯಾರಾದ 'ದಿ ನನ್ 2' ರಿಲೀಸ್​ಗೆ ಕ್ಷಣಗಣನೆ!

Untitled design - 2023-09-07T164334.431
Published on

ಅಮೆರಿಕಾ: 'ದಿ ಕಾಂಜೂರಿಂಗ್​' ಸಿರೀಸ್​ನ ಮತ್ತೊಂದು ಹಾರರ್ ಚಿತ್ರ 'ದಿ ನನ್​ 2' ಇದೇ ಸೆಪ್ಟಂಬರ್ 08 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಮುಖೇನ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದೆ.

ವಾರ್ನರ್​ ಬ್ರೋಸ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 'ದಿ ನನ್ 2' ಚಿತ್ರ ಈ ಹಿಂದೆ 2018ರ ಬ್ಲಾಕ್​ಬಸ್ಟರ್​ ಹಿಟ್​ 'ದಿ ನನ್' ಮೊದಲ ಭಾಗದ ಮುಂದುವರಿದ ಭಾಗವಾಗಿದೆ. ಮೈಕಲ್ ಚೇವ್ಸ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ತೈಸ್ಸಾ ಫಾರ್ಮಿಗಾ ಮತ್ತು ನಾಯಕನಾಗಿ ಜೋನಸ್​ ಬ್ಲೋಕೆಟ್​ ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್​ ಅನಾವರಣಗೊಳಿಸಿದ ಚಿತ್ರತಂಡಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಹಾರರ್ ಜಾನರ್​ ಇಷ್ಟಪಡುವ ಪ್ರೇಕ್ಷಕರು ಟ್ರೇಲರ್​ ಕಂಡು ಫಿದಾ ಆಗಿದ್ದಾರೆ. ಭಯಾನಕ ದೃಶ್ಯಗಳಿಂದ ರೂಪುಗೊಂಡಿರುವ ಚಿತ್ರದ ಬಿಡುಗಡೆಗೆ ಸದ್ಯ ಚಿತ್ರರಸಿಕರು ಕಾತರದಿಂದ ಕಾಯತೊಡಗಿದ್ದಾರೆ.

ಸೆಪ್ಟಂಬರ್​ 08 ರಂದು ಬಿಡುಗಡೆಯಾಗಲಿರುವ 'ದಿ ನನ್ 2' ಚಿತ್ರಕ್ಕೆ ಸದ್ಯ ಕ್ಷಣಗಣನೆ ಆರಂಭಗೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರ ಅಭಿಪ್ರಾಯ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net