

ಬೆಂಗಳೂರು: ರಾಜ್ಯದಲ್ಲಿ 24 ಗಂಟೆಯಲ್ಲಿ 2,798 ಕೊವಿಡ್-19 ಪ್ರಕರಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 36,216ಕ್ಕೇರಿದೆ.
ಇಂದು 70 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 880 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಒಟ್ಟು 14,716 ಜನರು ಕರೊನಾದಿಂದ ಚೇತರಿಸಿಕೊಂಡಿದ್ದಾರೆ. 613ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 20,883 ಎಂದು ಆರೋಗ್ಯ ಇಲಾಖೆ ಇಂದು ವರದಿ ನೀಡಿದೆ.
ಇಂದು ಬೆಂಗಳೂರು ನಗರದಲ್ಲಿ 1,533ಜನರಲ್ಲಿ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ 186, ಉಡುಪಿ-90, ಮೈಸೂರು-83, ತುಮಕೂರು-78, ಧಾರವಾಡ-77, ಯಾದಗಿರಿ-74, ದಾವಣಗೆರೆ-72, ಕಲಬುರಗಿ, ಬಳ್ಳಾರಿ ತಲಾ-65, ಬೀದರ್-63, ವಿಜಯಪುರ-48, ಉತ್ತರ ಕನ್ನಡ, ಗದಗ ತಲಾ 40, ಬಾಗಲಕೋಟೆಯಲ್ಲಿ 37, ಹಾಸನ-34, ರಾಮನಗರ-30, ಶಿವಮೊಗ್ಗ-26, ಮಂಡ್ಯ, ಕೊಪ್ಪಳ ತಲಾ 23, ಚಿಕ್ಕಬಳ್ಳಾಪುರ-20, ಚಾಮರಾಜನಗರ-17, ಹಾವೇರಿ-16, ರಾಯಚೂರು-14, ಕೋಲಾರ ಮತ್ತು ಕೊಡಗು ತಲಾ 12, ಚಿತ್ರದುರ್ಗ-9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ ಮತ್ತು ಚಿಕ್ಕಮಗಳೂರಲ್ಲಿ ತಲಾ ಮೂರು ಮಂದಿಯಲ್ಲಿ ಇಂದು ಕರೊನಾ ದೃಢಪಟ್ಟಿದೆ.