

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿದಾಟಿದೆ. ಕಳೆದ 24 ಗಂಟೆಯಲ್ಲಿ 6,706 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, 8,609 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 103 ಸೋಂಕಿತರು ಸಾವನ್ನಪ್ಪಿದ್ದಾರೆ.
ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯ ಪ್ರಮಾಣ ಹೆಚ್ಚುತ್ತಿರುವುದು ಸಮಾಧಾನ ತಂದಿದೆ.
ರಾಜ್ಯದಲ್ಲಿ ಒಟ್ಟು 2,03,200 ಕರೊನಾ ಪ್ರಕರಣಗಳು ಇದ್ದು, ಅದರಲ್ಲಿ ಡಿಸ್ಚಾರ್ಜ್ ಆದವರು 1,21,242 ಮಂದಿ. ಮೃತಪಟ್ಟವರು 3613 ಹಾಗೂ ಸಕ್ರಿಯ ಪ್ರಕರಣಗಳು 78,337.