ಮೊಟ್ಟೆ ತಿನ್ನುವ ವಿಚಾರಕ್ಕೆ ಜಗಳವಾಗಿ ಸ್ನೇಹಿತನ ಕೊಲೆ: ಒಬ್ಬನ ಬಂಧನ

murder
Published on

ಆನೇಕಲ್: ಸ್ನೇಹಿತರ ನಡುವೆ ಮೊಟ್ಟೆ ತಿನ್ನುವ ವಿಚಾರವಾಗಿ ಗಲಾಟೆ ನಡೆದು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೂರ್ಯ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಚಂದಾಪುರ ಬಳಿಯ ಹೆನ್ನಾಗರ ದಿನ್ನೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಹಾರ ಮೂಲದ ಮಹಮದ್ ಇಕ್ಬಾಲ್ ಷಾ ಹಾಗೂ ಜಿತೇಂದ್ರ ಷಾ ಕೆಲಸ ಮಾಡಿಕೊಂಡು ಕಟ್ಟಡದಲ್ಲಿಯೇ ವಾಸವಾಗಿದ್ದರು.

ಮೇ 13ರಂದು ರಾತ್ರಿ ಮದ್ಯ ಸೇವಿಸಿದ್ದ ಇಬ್ಬರೂ ಊಟ ಮಾಡುವಾಗ ಕೋಳಿ ಮೊಟ್ಟೆ ಹಂಚಿಕೊಳ್ಳುವ ವಿಚಾರವಾಗಿ ಜಗಳ ಮಾಡಿಕೊಂಡರು. ಈ ವೇಳೆ ಜಿತೇಂದ್ರ ಷಾ ಸಿಟ್ಟಿನ ಭರದಲ್ಲಿ ಮಹಮದ್ ಇಕ್ಬಾಲ್ ಷಾನ ತಲೆಗೆ ಸುತ್ತಿಗೆಯಿಂದ ಹೊಡೆದ. ಆ ಏಟಿಗೆ ಆತ ಸತ್ತೇ ಹೋದ. ಇದರಿಂದ ತೀವ್ರ ಗಾಬರಿಗೊಂಡ ಜಿತೇಂದ್ರ ಷಾ ಕಟ್ಟಡದ ಮುಂಭಾಗದಲ್ಲೇ ಶವವನ್ನು ಮುಚ್ಚಿ ಹಾಕಿ ಪರಾರಿಯಾಗಿದ್ದ.

ಆದರೆ ಕೊಲೆಯ ವಿಷಯ ಹೊರಬರಲು ಹೆಚ್ಚು ದಿನ ಬೇಕಾಗಲಿಲ್ಲ. ಶವ ಕೊಳೆತು ಕಟ್ಟಡದ ಮುಂಭಾಗದಿಂದ ದುರ್ವಾಸನೆ ಬರತೊಡಗಿತು. ವಾಸನೆ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೂ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net