

ರಿಪ್ಪನ್‌ಪೇಟೆ: ಮನಸ್ಸೆಂದರೆ ಕೋಪ, ಅಸೂಯೆಗಳಂತಹ ಸಂಗತಿಗಳನ್ನು ತುಂಬುವ ಕಸದ ಬುಟ್ಟಿಯಲ್ಲ. ಭಕ್ತಿ, ಶ್ರದ್ಧೆ, ನಂಬಿಕೆ, ಪ್ರೀತಿ, ವಿಶ್ವಾಸ, ಕರುಣೆಗಳನ್ನು ಶೇಖರಿಸುವ ಖಜಾನೆಯಾಗಬೇಕು ಎಂದು ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೆದಲಗುಡ್ಡೆ ಶ್ರೀ ಶನೈಶ್ಚರ ದೇವಸ್ಥಾನದ ವರ್ಧಂತ್ಯುತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಈ ಶರೀರವು ದುಃಖ, ದುಮ್ಮಾನಗಳಿಂದ ಕೂಡಿದೆಯಾದರೂ ಜೀವನದಲ್ಲಿ ಸುಖ ಪಡೆಯಬೇಕಾದರೆ ದ್ವೇಷ, ಅಸೂಯೆಗಳನ್ನು ತ್ಯಜಿಸಿ ಸದ್ಗುಣ ಸಂಪನ್ನರಾಗಿ ಬದುಕಬೇಕು ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನೆಮ್ಮದಿಗೆ ದೇವರ ಆರಾಧನೆ, ಆಚರಣೆಗಳು ಅಗತ್ಯ. ಆದರೆ ಧರ್ಮದ ಹೆಸರಿನಲ್ಲಿ ಮೌಢ್ಯಾಚರಣೆ ಒಳ್ಳೆಯದಲ್ಲ. ದೇವರಲ್ಲಿ ಭಕ್ತಿಯನ್ನಿರಿಸಿ ಪೂಜಿಸಿದರೆ ಲ ಖಂಡಿತವಾಗಿ ದೊರೆಯುತ್ತದೆ. ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಯ ಅಗತ್ಯವಿಲ್ಲ. ನೇರವಾಗಿ ಶ್ರದ್ಧಾಭಕ್ತಿಯಿಂದ ಜನರೇ ದೇವರನ್ನು ಕಾಣಬಹುದು. ಒಂದು ಗ್ರಾಮದಲ್ಲಿ ಶಾಂತಿ, ಸಹೋದರತ್ವ ಉಳಿಯಬೇಕಾದರೆ ದೇವಸ್ಥಾನಗಳಿರಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ, ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರ್ೀ, ಮುಖಂಡರಾದ ಈಶ್ವರಪ್ಪ, ದಿವಾಕರ, ನಾಗರಾಜ, ಚಂದ್ರೇಶ, ಸೋಮಶೇಖರ, ಅರ್ಚಕ ನಾಗರಾಜ, ಹಿರಿಯಣ್ಣ, ಪಿಎಸ್‌ಐ ಪ್ರವೀಣ್ ಇನ್ನಿತರರಿದ್ದರು.