

ಕೋಲಾರ: ಕಳವು ಮಾಡಿದ್ದ ಕೋಳಿ ಕದ್ದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯ ಕ್ಯಾಮೆರಾಮೆನ್ ಕಿರಣ್ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮೆನ್ ಕಿರಣ್ ಮೇಲೆ ಕೋಳಿ ಮಾಂಸದ ಅಂಗಡಿ ಮಾಲೀಕ ತಾಜ್ ಪೀರ್ ಹಲ್ಲೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಕಿರಣ್ ತಪ್ಪಿಸಿಕೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಲ್ಲೆಯನ್ನು ತಡೆದು ಹಲ್ಲೆಕೋರ ತಾಜ್‌ಪೀರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರದ ಅಮ್ಮವಾರಿಪೇಟೆ ವೃತ್ತದಲ್ಲಿ ಕಳ್ಳತನ ಮಾಡಿದ ಕೋಳಿಗಳನ್ನು ಖರೀದಿಸುವ ಅಸಾಮಿಯನ್ನು ಗುರು ಪತ್ತೆ ಮಾಡಿ, ವಿಡಿಯೋ ಮಾಡಲು ಹೋಗಿ ಕಿರಣ್ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಆತ ಕೋಳಿ ಕತ್ತರಿಸುವ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಳಿ ಮಾಂಸದ ಅಂಗಡಿ ಮಾಲೀಕ ತಾಜ್ ಪೀರ್‌ನನ್ನು ವಶಕ್ಕೆ ಪಡೆದಿರುವ ಗಲ್‌ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.