ಹುಚ್ಚು ಹಿಡಿದ ಹೋರಿ ಸೆರೆ

BHR HORI
ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಹುಚ್ಚು ಹಿಡಿದ ಹೋರಿಯನ್ನು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೆರೆ ಹಿಡಿದರು.
Published on

ಬಾಳೆಹೊನ್ನೂರು: ಸಮೀಪದ ಕಡಬಗೆರೆ ಗ್ರಾಮದಲ್ಲಿ ಹುಚ್ಚು ಹಿಡಿದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹೋರಿಯನ್ನು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸೆರೆ ಹಿಡಿದಿದ್ದಾರೆ.
ಕಡಬಗೆರೆಯಲ್ಲಿ ಹೋರಿಗೆ ಹುಚ್ಚು ಹಿಡಿದು ಗ್ರಾಮದ ತುಂಬೆಲ್ಲಾ ತಿರುಗುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿತ್ತು. ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಭಯ ಪಡುತ್ತಿದ್ದರು. ಇದನ್ನು ಅರಿತ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹೋರಿಯನ್ನು ಬುಧವಾರ ಹಿಡಿದು ಜೇನುಗದ್ದೆಯ ಪಶು ಇಲಾಖೆಯ ವೈದ್ಯರಿಗೆ ನೀಡಿದ್ದಾರೆ.
ದೇವದಾನ ಗ್ರಾಪಂ ಉಪಾಧ್ಯಕ್ಷೆ ಶೀಲಾ ವಿಜಯ್, ಸ್ಥಳೀಯರಾದ ಹರೀಶ್ ಕೊಟ್ಟಿಗೆಮನೆ, ರಶೀದ್, ಜಗ್ಗು ಹೆಗಡಪ್ಪಗೌಡ, ಸ್ವಯಂ ಸೇವಕರಾದ ಸಂಜಿತ್ ಪೆರುಮಾಳ್, ಸಚಿನ್, ಗಿರೀಶ್, ಮಂಜು ಬಂಗಾರಿ, ಚಂದ್ರಶೇಖರ್ ರೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net