ಸೀರೆ ಗೆದ್ದ ಅದೃಷ್ಟಶಾಲಿ ನಾರಿಯರು

mbl sari
ಮುಳಬಾಗಿಲು ಹೊರವಲಯದ ಜ್ಞಾನಜೋತಿ ಶಾಲೆಯ ವೇದಿಕೆಯಲ್ಲಿ ನಂ-.1 ಕನ್ನಡ ದಿನಪತ್ರಿಕೆ ವಿಜಯವಾಣಿ ಪ್ರಸ್ತುತಪಡಿಸುವ ನಾರಿ ನಿನಗೊಂದು ಸಾರಿ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಸೀರೆ ಗೆಲ್ಲುವ ಅದೃಷ್ಟ್ಟವಂತ ಮಹಿಳೆಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಶಾಲೆಯ ಪ್ರಾಂಶುಪಾಲೆ ಬಿ.ಆರ್​. ಮಂಜುಳಾ ಚಂದ್ರಶೇಖರ್​, ಶಾಲೆಯ ಅಧ್ಯಕ್ಷ ಜಿ.ಚಂದ್ರಶೇಖರ್​, ಕಾರ್ಯದರ್ಶಿ ಅಭಿನವ್​ ವಿವೇಕ್​, ತಾಲೂಕು ವರದಿಗಾರ ಎ.ಅಪ್ಪಾಜಿ ಗೌಡ ಇದ್ದರು.
Published on

ಮುಳಬಾಗಿಲು: ವಿಜಯವಾಣಿ ನಂ.1 ದಿನಪತ್ರಿಕೆಯಾಗಿ ಹೊರ ಹೊಮ್ಮುವ ಜತೆಗೆ ಮಹಿಳಾ ಓದುಗರಿಗೆ ಸ್ಪರ್ಧೆ ಏರ್ಪಡಿಸಿರುವುದು ಮಾದರಿ ಕಾರ್ಯ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಭಿರುಚಿ ಬೆಳೆಸಿಕೊಂಡರೆ ಜ್ಞಾನಾರ್ಜನೆ ವಿಕಾಸಗೊಳ್ಳುತ್ತದೆ ಎಂದು ಜ್ಞಾನಜ್ಯೋತಿ ಶಾಲೆಯ ಪ್ರಾಂಶುಪಾಲೆ ಬಿ.ಆರ್​.ಮಂಜುಳಾ ಚಂದ್ರಶೇಖರ್​ ತಿಳಿಸಿದರು.

ನಗರದ ಹೊರವಲಯದ ಜ್ಞಾನಜೋತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ "ವಿಜಯವಾಣಿ' ಓದುಗರಿಗಾಗಿ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ದಿನಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಟ್ಟದಲ್ಲಿ ವಿಜಯವಾಣಿ ಆರಂಭಿಸಿ ಸಮಗ್ರ ವಿಷಯಗಳನ್ನು ಸಂಕ್ಷಿಪ್ತವಾಗಿ ಮುದ್ರಿಸಿ ಓದುಗರ ಮನೆ ಬಾಗಿಲಿಗೆ ತಲುಪಿಸಿ ಕನ್ನಡಿಗರ ಮನ ಗೆದ್ದಿರುವ ವಿಆರ್​ಎಲ್​ ಮೀಡಿಯಾ ಪ್ರೆವೇಟ್​ ಲೀಮಿಟೆಡ್​ನ ಕಾರ್ಯ ಶೈಲಿಯೇ ಒಂದು ಅಮೋಘ ಎಂದು ಬಣ್ಣಿಸಿದರು.

ಶಾಲೆಯ ಮುಖ್ಯಸ್ಥ ಜಿ.ಚಂದ್ರಶೇಖರ್​ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ, ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಮಿತ್ರ ಒಳಗೊಂಡ ಪತ್ರಿಕೆ ಪ್ರಕಟಿಸುತ್ತಿದ್ದು, ತುಂಬಾ ಅಚ್ಚುಕಟ್ಟಾಗಿ ಎಲ್ಲ ವಿಷಯಗಳನ್ನು ಒಳಗೊಂಡ ಪತ್ರಿಕೆಯಾಗಿ ಮೂಡಿ ಬರುತ್ತಿದೆ. ವಿದ್ಯಾರ್ಥಿಗಳು ದಿನದ ಅರ್ಧಗಂಟೆ ಈ ಪತ್ರಿಕೆ ಓದಿದರೂ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಕನ್ನಡ ಭಾಷೆ, ವ್ಯಾಕರಣ, ಸೇರಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಜ್ಞಾನ ಭಂಡಾರ ವಿದ್ಯಾರ್ಥಿಮಿತ್ರ ಪತ್ರಿಕೆಯಲ್ಲಿ ಅಡಗಿದೆ, ಅದೇ ರೀತಿ ವಿಜಯವಾಣಿ ಸ್ಮಾರ್ಟ್​ ಆಗಿ ಓದುಗರನ್ನು ಆಕರ್ಷಿಸಲು ಸಂಪಾದಕೀಯ ಮಂಡಳಿಯ ಹಾಗೂ ವರದಿಗಾರರ ಉತ್ತಮ ಬರಹಗಳು ಕಾರಣವಾಗಿವೆ ಎಂದರು.

ವಿಜಯವಾಣಿ ತಾಲೂಕು ವರದಿಗಾರ ಎ.ಅಪ್ಪಾಜಿ ಗೌಡ ಮಾತನಾಡಿ, ಪತ್ರಿಕೆ ಪ್ರಸ್ತುತಪಡಿಸುವ ನಾರಿ ನಿನಗೊಂದು ಸಾರಿ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಸೀರೆ ಗೆಲ್ಲುವ ಅವಕಾಶವನ್ನು ಫೆ.6 ರಿಂದ ಮಾ.23 ರವರೆಗೆ ಏರ್ಪಡಿಸಲಾಗಿತ್ತು. ಲಕ್ಕಿ ಡ್ರಾ ಸ್ಪರ್ಧೆ ಸೀಸನ್​&-7ರಲ್ಲಿ ಮುಳಬಾಗಿಲು ತಾಲೂಕಿನಿಂದ ಸಾವಿರಾರು ಓದುಗ ಮಹಿಳೆಯರು ಪಾಲ್ಗೊಂಡಿದ್ದು ಅವರಲ್ಲಿ ಸರಿ ಉತ್ತರಗಳನ್ನು ನೀಡಿರುವ ಹಲವು ಸ್ಪರ್ಧಿಗಳಲ್ಲಿ 5 ಜನ ಅದೃಷ್ಟವಂತ ಮಹಿಳೆಯರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಉಳಿದವರಿಗೆ ಮುಂದಿನ ಸ್ಪರ್ಧೆಗಳಲ್ಲಿ ಅದೃಷ್ಟ ಒಲಿಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ಪ್ರಸರಣ ವಿಭಾಗದ ಜಿಲ್ಲಾ ವ್ಯವಸ್ಥಾಪಕ ನರಸಿಂಹಮೂರ್ತಿ, ಜ್ಞಾನಜೋತಿ ಶಾಲೆಯ ಕಾರ್ಯದರ್ಶಿ ಅಭಿನವ್​ ವಿವೇಕ್​, ಮುಖ್ಯಶಿಕ್ಷಕರಾದ ಕೆ.ಯು. ಸಿಜೊ, ರೇಷ್ಮಾ ಕೌಸರ್​ ಇದ್ದರು.

* ಲಕ್ಕಿ ಡ್ರಾ ವಿಜೇತರು

ಆರ್​. ಸುಷ್ಮಾ ಶಿಕ್ಷಕಿ, ಮುತ್ಯಾಲ ಪೇಟೆ, ಎಸ್​.ಎಲ್​. ಅಂಬಿಕಾ ಗೃಹಿಣಿ ಅಗ್ರಹಾರ, ಪಾರಿಜಾತ ಶಿಕ್ಷಕಿ, ಟೀಚರ್ಸ್​ ಕಾಲನಿ, ಮುಳಬಾಗಿಲು. ಕೆ.ಎನ್​. ಉಷಾರಾಣಿ ಗೃೃಹಿಣಿ, ಬೆಸ್ತರಹಳ್ಳಿ, ಸುಮಾ&ಗೃಹಿಣಿ ಬೇವಹಳ್ಳಿ, ಮುಳಬಾಗಿಲು ಲಕ್ಕಿ ಡ್ರಾ ವಿಜೇತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net