

solar eclipse ; ಈ ವರ್ಷ ಪಿತೃ ಪಕ್ಷವು ಗ್ರಹಣದೊಂದಿಗೆ ಪ್ರಾರಂಭವಾಗಿ ಮತ್ತು ಗ್ರಹಣದೊಂದಿಗೆ ಕೊನೆಗೊಳ್ಳಲಿದೆ. ಈ ವರ್ಷದ ಎರಡನೇ ಸೂರ್ಯಗ್ರಹಣವು ಇದೇ ಸೆಪ್ಟೆಂಬರ್‌ನಲ್ಲಿ ಸಂಭವಿಸಲಿದ್ದು, ವೈಜ್ಞಾನಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್‌ನಲ್ಲಿ ಸಂಭವಿಸಿತ್ತು ಇದೀಗ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ. ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ನಡೆದರೆ, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ. ಹಾಗಿದ್ರೆ ಸೂರ್ಯಗ್ರಹಣ ಯಾವ ಸಮಯದಲ್ಲಿ ಹಾಗೂ ಎಲ್ಲಿ ಸಂಭವಿಸುತ್ತದೆ ಮತ್ತು ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಯೋಣ.
ವರ್ಷದ ಕೊನೆಯ ಸೂರ್ಯಗ್ರಹಣವು ಸೆಪ್ಟೆಂಬರ್ 21, 2025 ರಂದು ಸಂಭವಿಸಲಿದ್ದು, ಇದು ರಾತ್ರಿ 10:59 ರಿಂದ ಬೆಳಗಿನ ಜಾವ 3:23 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣದ ಒಟ್ಟು ಅವಧಿ ಸುಮಾರು 4 ಗಂಟೆ 24 ನಿಮಿಷಗಳು ಇರಲಿದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ, ಈ ಸೂರ್ಯಗ್ರಹಣವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.
ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಪ್ರಮುಖವಾಗಿ ನ್ಯೂಜಿಲೆಂಡ್, ಫಿಜಿ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಗೋಚರಿಸಲಿದೆ. ಇನ್ನೂ ನ್ಯೂಜಿಲೆಂಡ್‌ನಲ್ಲಿ ಸೂರ್ಯನು ಸುಮಾರು 80% ರಷ್ಟು ಆವರಿಸಿರುವಂತೆ ಕಾಣಿಸುತ್ತದೆ.
(ಏಜೆನ್ಸೀಸ್)
5) ಗ್ರಹಣದ ಸಮಯದಲ್ಲಿ ಯಾವುದೇ ಪೂಜೆಯನ್ನು ಮಾಡಬಾರದು.
4) ಈಗಾಗಲೇ ಬೇಯಿಸಿದ ಆಹಾರವನ್ನು ಅದಕ್ಕೆ ತುಳಸಿ ಎಲೆಗಳನ್ನು ಸೇರಿಸಿ ತಿನ್ನಬಹುದು.
3) ಈ ಸಮಯದಲ್ಲಿ ಆಹಾರ ಮತ್ತು ನೀರನ್ನು ಸೇವಿಸಬಾರದು.
2) ಗ್ರಹಣದ ಸಮಯದಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು
1) ಸೂರ್ಯಗ್ರಹಣದ ಸಮಯದಲ್ಲಿ ಬರಿಗಣ್ಣಿನಿಂದ ಸೂರ್ಯನನ್ನು ನೋಡಬಾರದು.