ಜಿಲ್ಲೆಯ ಗರಿಷ್ಠ ಮಳೆ ಮೂಡುಬಿದಿರೆ 74.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 53.0 ಮಿ.ಮೀ ಬಂಟ್ವಾಳ 57.6 ಮಿ.ಮೀ, ಉಳ್ಳಾಲದಲ್ಲಿ 25.0 ಮಿಮಿ, ಕಡಬದಲ್ಲಿ 37.8 ಮಿಮಿ, ಪುತ್ತೂರು 30.0 ಮಿ.ಮೀ, ಮಂಗಳೂರಿನಲ್ಲಿ 38.8 ಮಿಮಿ, ಸುಳ್ಯದಲ್ಲಿ 46.8 ಮಿ.ಮೀ., ಮೂಲ್ಕಿ 59.1 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 5.590 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 25.20 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.395 ಮೀ, ಗುರುಪುರ ನದಿ (ಅಡ್ಡೂರು) 2.200 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.