ಪೊಲೀಸ್ ಠಾಣೆಯಲ್ಲೇ ಕತ್ತು ಕೊಯ್ದುಕೊಂಡ ಯುವಕ!

103
Published on
ಹುಬ್ಬಳ್ಳಿ: ಪೊಲೀಸ್ ವಿಚಾರಣೆಗೆಂದು ಠಾಣೆಗೆ ಬಂದಿದ್ದ ಯುವಕ, ಪೊಲೀಸರ ಮುಂದೆಯೇ ಕುತ್ತಿಗೆ ಕೊಯ್ದುಕೊಂಡು ಪೊಲೀಸರನ್ನು ಬೆದರಿಸಲು ಮುಂದಾದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. 
ವಿಚಾರಣೆಯ ವೇಳೆ ರಾಘವೇಂದ್ರ ಯುವಕ ಬ್ಲೇಡ್ ಬಳಸಿ ಪೊಲೀಸರ ಮುಂದೆಯೇ ಕತ್ತು ಕೊಯ್ದುಕೊಂಡಿದ್ದಾನೆ. ಇಂಡಿ ಪಂಪ್ ಸರ್ಕಲ್​​ ಬಳಿಯಲ್ಲಿನ ಬಿರಿಯಾನಿ ಹೌಸ್​ ಅಂಗಡಿಯ ಮಾಲೀಕರ ಜೊತೆ ರಾಘವೇಂದ್ರ ಗಲಾಟೆ ಮಾಡಿಕೊಂಡಿದ್ದ. ಹೀಗಾಗಿ ಪೊಲೀಸರು ಬಿರಿಯಾನಿ ಹೌಸ್​ ಮಾಲೀಕ ಹಾಗೂ ರಾಘವೇಂದ್ರ ಎಂಬ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. 
ವಿಚಾರಣೆ ವೇಳೆ ಪೊಲೀಸರ ಮುಂದೆ ಕುತ್ತಿಗೆ ಕೊಯ್ದುಕೊಂಡು, ಬೆದರಿಸಿದ್ದಾನೆ. ಈ ವೇಳೆ ಹಿರಿಯ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ. ನಂತರ ಯುವಕನನ್ನು ಕಿಮ್ಸ್​ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net