

ಹಾವೇರಿ: ಭಾರತೀಯ ಸಂಸತಿ ಮತ್ತು ಪರಂಪರೆಯನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ನಿರಂತರ ಕ್ರಿಯಾಶೀಲತೆಯ ಕಾರ್ಯನಡೆಯಿಂದ ಭದ್ರ ಭಾರತದ ನಿಮಾರ್ಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ 2024-&25ನೇ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕಿನ ಅವಿಭಾಜ್ಯ ಅಂಗವಾಗಿ ಶಿಕ್ಷಣ ಒಂದೆಡೆ ಇದ್ದರೆ, ಮತ್ತೊಂದೆಡೆ ಕ್ರೀಡೆ ಮತ್ತು ಸಾಂಸತಿಕ ಚಟುವಟಿಕೆಗಳು ವಿಕಾಸಕ್ಕೆ ನಾಂದಿಯಾಗುತ್ತವೆ. ಪ್ರಬಲ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ಶಿಕ್ಷಣದಿಂದ ಮಾನಸಿಕ ಪ್ರೌಢಿಮೆ ಬೆಳೆದರೆ, ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.
ವಿದ್ಯಾಥಿರ್ಗಳಾದವರು ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಸಾಧನೆಯ ಹಾದಿ ಹಿಡಿಯಬೇಕಿದೆ. ಯಾವುದೆ ವೃತ್ತಿ ಕ್ಷೇತ್ರವಿರಲಿ ಆಯ್ಕೆಯ ವಿಷಯ ಬಂದಾಗ ಜಾಗೃತಿಯ ಹೆಜ್ಜೆ ಹಾಕುವ ಅಗತ್ಯತೆ ಇದೆ. ಪ್ರತಿ ವಿದ್ಯಾಥಿರ್ಯಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಸೂಕ್ತ ಅವಕಾಶ ಮತ್ತು ವೇದಿಕೆ ದೊರೆತಾಗ ಅವರಲ್ಲಿರುವ ಪ್ರತಿಭೆ ಹೊರಹಾಕಲು ಸಾಧ್ಯವಾಗುತ್ತದೆ. ಪಾಲಕರಾದವರು ತಮ್ಮ ಮಕ್ಕಳಿಗೆ ಯೋಗ್ಯ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾರ್ಪಡಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಗದಗ ಕೆಎಲ್ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಎ.ಕೆ. ಮಠ ಮಾತನಾಡಿ, ವಿದ್ಯಾಥಿರ್ಗಳಲ್ಲಿ ವಿನಯ, ವಿಧೇಯತೆ ಬೆಳೆದು ಬಂದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಸ್ಕಾರ ಮತ್ತು ಸತ್ಚಿಂತನೆಗಳು ಮನುಷ್ಯನನ್ನು ಮೇಧಾವಿಯನ್ನಾಗಿ ಮಾಡಬಲ್ಲವು. ವಿದ್ಯಾಥಿರ್ ಜೀವನದಲ್ಲಿ ಸೋಲು-ಗೆಲುವುಗಳು ಸಹಜ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವತಿರ್ಸಿ ಮುನ್ನಡೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರ ಪ್ರತಿನಿಧಿ ಎಂ.ಸಿ. ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರನ್ನು ಸನ್ಮಾನಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಿ.ಬಿ. ಹಿರೇಮಠ, ಎಸ್.ಎಂ. ಹುರಳಿಕುಪ್ಪಿ, ಎಸ್.ಜೆ. ಹೆರೂರ, ಜೆ.ಎಸ್. ಐರಣಿ, ಬಸವರಾಜ ಮಾಸೂರ, ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳ್ಳಿಯವರ, ಡಾ. ಎಸ್.ಆರ್. ನಾಯಕ, ಜಿ.ಕೆ. ಮಂಕಣಿ, ಡಾ. ಎಂ.ಪಿ. ಕಣವಿ, ಪೂಜಾ ಎಂ., ಶ್ರೀದೇವಿ ದೊಡ್ಡಮನಿ, ರೂಪಾ ಕೋರೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.