ಇಲ್ನೋಡಿ ಪೊಲೀಸರು ಕೊಟ್ಟ 'ಕುಚ್ ಕುಚ್ ಹೋತಾ ಹೈ' ಟ್ವಿಸ್ಟ್​ ಏನಂತ..!

nagpur police
Published on

ನಾಗ್ಪುರ: ಕರೊನಾದಂತಹ ಸಂಕಷ್ಟ ಕಾಲದಲ್ಲಿ ಮನೆಯಿಂದ ಹೊರ ಹೋಗುವಾಗ ಮಾಸ್ಕ್​ ಧರಿಸಲೇಬೇಕಾದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸಲು 'ಕುಚ್ ಕುಚ್ ಹೋತಾ ಹೈ' ದೃಶ್ಯ ಬಳಸಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.

ಮಾಸ್ಕ್​ ಧರಿಸುವ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ದೇಶದಾದ್ಯಂತ ಪೊಲೀಸರು ಈಗಾಗಲೇ ವಿಭಿನ್ನ ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಾಗ್ಪುರ ಪೊಲೀಸ್​ ಇಲಾಖೆಯೂ ಮಾಸ್ಕ್​ ಕಡ್ಡಾಯ ಎಂದು ಜಾಗೃತಿ ಮೂಡಿಸಲು ಬಾಲಿವುಡ್​ನ 'ಕುಚ್ ಕುಚ್​ ಹೋತಾ ಹೈ' ಸಿನಿಮಾದ ದೃಶ್ಯ ಬಳಸಿಕೊಂಡಿದೆ.

ಅಂಜಲಿ (ಕಾಜೋಲ್) ಅವರನ್ನು ಎಡ ತೋಳಿನಲ್ಲಿ ಅಪ್ಪಿಕೊಳ್ಳುವ ರಾಹುಲ್ (ಶಾರುಖ್ ಖಾನ್), ಬಲಗೈಯಲ್ಲಿ ಟೀನಾ (ರಾಣಿ ಮುಖರ್ಜಿ) ಕೈ ಹಿಡಿದಿದ್ದಾರೆ. ಈ ದೃಶ್ಯವನ್ನು ತಿರುಚಿರುವ ನಾಗ್ಪುರ ಪೊಲೀಸರು, ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊರಹೋಗಲು ಸಿದ್ಧರಿದ್ದಲ್ಲಿ (ಅಂಜಲಿ) ​ನೀವು (ರಾಹುಲ್​) ಮಾಸ್ಕ್​ ಧರಿಯೇ(ಟೀನಾ) ಹೋಗಬೇಕು... ಎಂದು ಆ ಪಾತ್ರಧಾರಿಗಳ ಚಿತ್ರದ ಮೇಲೆ ಟ್ಯಾಗ್​ಲೈನ್​ ಹಾಕಿ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

'Don't let this bond break.. Kyunki, Bohot Kuch Hota Hai!' ಎಂದು ಶೀರ್ಷಿಕೆ ಹಾಕಿ ಪೋಸ್ಟ್​ ಮಾಡಿರುವ ಚಿತ್ರವನ್ನು ಸಾವಿರಾರು ಮಂದಿ ಮೆಚ್ಚಿದ್ದಾರೆ. 'ಈ ಬಂಧವನ್ನು ಮುರಿಯಬೇಡಿ...' ಎಂದಿರುವ ಶೀರ್ಷಿಕೆ ಸ್ವಲ್ಪ ಹಾಸ್ಯಮಯ ಎನಿಸಿದರೂ ಮಾಸ್ಕ್​ನ ಪ್ರಾಮುಖ್ಯತೆಯನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಪೊಲೀಸರ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net