ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆಯಾದ ಪತಿ; ರಣರಂಗವಾಯ್ತು ಎರಡನೇ ಪತ್ನಿಯ ಸೀಮಂತ!

76564
Published on

ಬೆಂಗಳೂರು: ಆತ ಮೊದಲ ಪತ್ನಿಯ ಕಣ್ತಪ್ಪಿಸಿ ಎರಡನೇ ಮದುವೆ ಆಗಿದ್ದ. ಇದೀಗ ಆಕೆಯ ಸೀಮಂತ ಕಾರ್ಯಕ್ರಮದ ವೇಳೆ ಮೊದಲ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಬಂದು ಪ್ರಶ್ನಿಸಿದ್ದಾರೆ. ಇದರಿಂದ ಚಂದ್ರಲೇಔಟ್​​ನಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯದಲ್ಲಿ ಮಾರಾಮಾರಿ ನಡೆದಿದ್ದು, ರಣರಂಗವಾಗಿ ಬದಲಾಗಿದೆ.

ತೇಜಸ್ ಎಂಬಾತ 2008ರಲ್ಲಿ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ತೇಜಸ್ ಮೊದಲ ಪತ್ನಿಯ ಕಣ್ತಪ್ಪಿಸಿ, ಎರಡನೇ ಮದುವೆ ಆಗಿದ್ದಾನೆ. ಎರಡನೇ ಪತ್ನಿಯ ಸೀಮಂತ ಕಾರ್ಯ ನಡೆಯುತ್ತಿದ್ದ ವಿಚಾರ ಗೊತ್ತಾಗಿ, ಮೊದಲ ಪತ್ನಿ ಚೈತ್ರ ಮಮತ್ತು ಕುಂಟುಂಬಸ್ಥರು ಪ್ರಶ್ನಿಸಲು ಹೋಗಿದ್ದಾರೆ.

ಗಂಡನ ಎರಡನೇ ಮದುವೆ ವಿಚಾರ ತಿಳಿದು ಮಹಿಳಾ ಸಂಘಟನೆಯೊಂದಿಗೆ ಚೈತ್ರ ಕುಟುಂಬ ಸೀಮಂತ ಕಾರ್ಯ ನಡೆಯುತ್ತಿದ್ದಲ್ಲಿಗೆ ಹೋಗಿ ಪ್ರಶ್ನಿಸಿದ್ದಾರಂತೆ. ಈ ವೇಳೆ ಸ್ಥಳದಲ್ಲಿ ವಾಗ್ವಾದ ನಡೆದು, ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದೀಗ ತೇಜಸ್ ಮದುವೆ ನಂತರವು ಬೇರೋಬ್ಬ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ಪತ್ನಿ ಚೈತ್ರಾಳಿಗೆ ತೇಜಸ್ ಹಲ್ಲೆ ಮಾಡಿದ್ದ. ಬಳಿಕ ಇವರಿಬ್ಬರು ವಿಚ್ಛೇದನಕ್ಕೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ತೇಜಸ್ ಎರಡನೇ ಮದುವೆ ಆಗಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net