

ಪುಣೆ (ಮಹಾರಾಷ್ಟ್ರ): ಗಂಡ, ಹೆಂಡತಿ ಜಗಳ ತಾರಕಕ್ಕೇರಿದ್ದು, ಇದರಿಂದ ಮನೆಯಿಂದ ಹೊರ ಬಂದ ಗಂಡ ಕಾರು ಚಲಾಯಿಸಿಕೊಂಡು ಹೊರಟ್ಟಿದ್ದಾನೆ. ಅಂತಿಮವಾಗಿ ನದಿಯೊಂದರ ಬಳಿ ಬಂದು ನದಿಗೆ ಹಾರುವ ಮುನ್ನ ಪತ್ನಿಗೆ ತನ್ನ ಲೊಕೇಷನ್ ಕಳಸಿ ನದಿಗೆ ಹಾರಿದ್ದಾನೆ. ಈ ಘಟನೆ ನಡೆದಿರೋದು ಮಹಾರಾಷ್ಟ್ರದ ಪುಣೆಯಲ್ಲಿ. ನದಿಗೆ ಹಾರಿದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರುಕುಳ ತಿಂಡಿ ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದ ಶ್ರೀಕಾಂತ್ ವಿ ದೇಶಮುಖ್ ಆತ್ಮತ್ಯೆಗೆ ಶರಣಾದ ವ್ಯಕ್ತಿ. ಪುಣೆಯ ಢಂಕವಾಡಿಯಲ್ಲಿರುವ ಇವರ ಮನೆ ಇದೆ. ಪತ್ನಿ ಭಾನುವಾರ ಬೆಳಗ್ಗೆ ಜಗಳ ಆಡಿಕೊಂಡ ಈತ ಮನೆಯಿಂದ ಹೊರ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ ಮುಂಜಾನೆ ಹೆಂಡತಿ ಜೊತೆ ಜಗಳ ಆಡಿಕೊಂಡು ಬಳಿಕ ಕಾರನ್ನು ಓಡಿಸಿಕೊಂಡು ಪುಣೆಯಿಂದ ಸುಮಾರು 75 ಕಿ.ಮೀ ದೂರದ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ವರಂಧ ಘಾಟ್ ಪ್ರದೇಶಕ್ಕೆ ಬಂದ ಈತ ಕಾರಿನಲ್ಲಿ ಕೂತು ಹೆಂಡತಿಗೆ ಲೊಕೇಷನ್ ಕಳಿಸಿ 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಬಳಿಕ ಮೊಬೈಲ್ಅನ್ನು ಕಾರಿನಲ್ಲಿಯೇ ಬಿಟ್ಟು ನದಿಗೆ ಹಾರಿದ್ದಾನೆ ಎಂದು ಸ್ಥಳೀಯ ಭೋರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಣ್ಣಾ ಪವಾರ್ ಮಾಹಿತಿ ನೀಡಿದ್ದಾರೆ.
ಗಂಡನ ಫೋನ್ನಿಂದ ಆತ್ಮಹತ್ಯೆ ಬೆದರಿಕೆ ಮೆಸೇಜ್ ಬಂದಿದ್ದೇ ತಡ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಗಂಡ ಕಳಿಸಿದ್ದ ಲೊಕೇಷನ್ ತೋರಿಸಿದ್ದಾಳೆ, ಈ ಮಾಹಿತಿ ಆಧರಿಸಿ ಪೊಲೀಸರು ಕೂಡಲೇ ಭೋರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ವಿಶೇಷ ತಂಡ ರಚಿಸಿದ ಪೊಲೀಸರು ದೇಶಮುಖ್ ಅವರು ಕಳಿಸಿದ್ದ ಲೊಕೇಷನ್‌ನತ್ತ ಧಾವಿಸಿದರು. ಆದರೆ, ಅಲ್ಲಿ ಆತ ಕಾಣಲಿಲ್ಲ. ಆತನ ಕಾರು ರಸ್ತೆ ಪಕ್ಕದಲ್ಲಿ ನಿಂತಿತ್ತು. ನದಿಯ ಮೇಲೆ ನಿರ್ಮಿಸಲಾಗಿದ್ದ ಸೇತುವೆಯೊಂದರ ಕೆಳಗೆ ಪರಿಶೀಲನೆ ನಡೆಸಲು ಮುಂದಾದಾಗ ದೇಶಮುಖ್ ಅವರ ಮೃತ ದೇಹ ಸಿಕ್ಕಿದೆ.
ಬಳಿಕ ನದಿಯ ಬಳಿಯಿಂದ ದೇಶಮುಖ್ ಅವರ ಮೃತ ದೇಹ ಹೊರ ತಂದ ತಂಡ ಅದನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದೆ. ಈ ಪ್ರಕರಣವನ್ನು ಆಕಸ್ಮಿಕ ಸಾವು ಪ್ರಕರಣ ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾನೆ.