ವೈದ್ಯರ ಶ್ರಮದಿಂದ ಆಸ್ಪತ್ರೆಗೆ ಉತ್ತಮ ಹೆಸರು

tth sanmana
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ವೈದ್ಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಆರಗ ಜ್ಞಾನೇಂದ್ರ, ರಹಮತ್ ಉಲ್ಲಾ ಅಸಾದಿ, ಡಾ. ಗಣೇಶ್ ಭಟ್, ಡಾ. ಟಿ.ನಾರಾಯಣ ಸ್ವಾಮಿ ಇತರರಿದ್ದರು.
Published on

ತೀರ್ಥಹಳ್ಳಿ: ಉತ್ತಮ ನಡವಳಿಕೆ, ಜನಪರವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ವರ್ಗಾವಣೆಗೊಳ್ಳುವ ಸರ್ಕಾರಿ ನೌಕರರನ್ನು ಬೀಳ್ಕೊಡುವ ವೇಳೆ ಹೃದಯ ಭಾರವಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಿಂದ ವರ್ಗಾವಣೆಗೊಂಡ ಆರು ಮಂದಿ ವೈದ್ಯರು ಮತ್ತು ಸಿಬ್ಬಂದಿಗೆ ಭಾನುವಾರ ಪಟ್ಟಣದ ಮಾಧವ ಮಂಗಲ ಸಭಾಭವನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಜೆಸಿ ಆಸ್ಪತ್ರೆಯ ಸಿಬ್ಬಂದಿ ಒಂದು ಕುಟುಂಬದ ಸದಸ್ಯರಂತೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದ ಲವಾಗಿ ಈ ಆಸ್ಪತ್ರೆ ರಾಜ್ಯದ ಉತ್ತಮ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಪಟ್ಟಣದಲ್ಲಿರುವ ಖಾಸಗಿ ವೈದ್ಯರು ಸಹ ಈ ಆಸ್ಪತ್ರೆಗೆ ಸಹಕಾರಿಗಳಾಗಿರುವುದು ವಿಶೇಷ ಎಂದರು.

ಕೊಪ್ಪ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಯಾದ ಡಾ. ಗಣೇಶ್ ಭಟ್ ಮಾತನಾಡಿ, ಈ ತಾಲೂಕಿನಲ್ಲಿ ಕೆಲಸ ಮಾಡಿ ನಿರ್ಗಮಿಸುತ್ತಿರುವ ಸರ್ಕಾರಿ ನೌಕರರಾದ ನಮಗೆ ಈ ಬೀಳ್ಕೊಡುಗೆ ಅಪರೂಪದ್ದು. ಎಲ್ಲರ ಪ್ರೀತಿಗೆ ಋಣಿಯಾಗಿದ್ದೇವೆ. ಆಸ್ಪತ್ರೆಯ ಡಿ ದರ್ಜೆ ನೌಕರರಿಗೆ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಟಿ.ನಾರಾಯಣ ಸ್ವಾಮಿ, ಕೆ.ನಾಗರಾಜ ಶೆಟ್ಟಿ, ಡಾ. ನಿಶ್ಚಲ್, ಪತ್ರಕರ್ತ ಡಾನ್ ರಾಮಣ್ಣ, ನಿಖಿಲ್ ಕಾಮತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net