

ಬೆಂಗಳೂರು: ಹೊರರಾಜ್ಯದ ವ್ಯಕ್ತಿಯೊಬ್ಬ ಹಿಂದಿ ಮಾತನಾಡುವಂತೆ ಕನ್ನಡಿಗ ಚಾಲಕನ ಜತೆಗೆ ಕಿರಿಕ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಳೇ ಏರ್‌ಪೋರ್ಟ್ ರಸ್ತೆಯ ಮುರಗೇಶ್ ಪಾಳ್ಯದ ಎನ್.ಎಸ್.ಆರ್ಕೆಡ್ ಬಳಿ ಈ ಘಟನೆ ನಡೆದಿದೆ. ಆದರೆ ಯಾವ ಕಾರಣಕ್ಕೆ ಭಾಷೆ ವಿಚಾರ ಇಲ್ಲಿ ಚರ್ಚೆಗೆ ಬಂದಿದೆ ಎಂಬುದು ಗೊತ್ತಿಲ್ಲ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಹೊರರಾಜ್ಯದ ವ್ಯಕ್ತಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಡಿಸಿದ್ದಾರೆ. ಕರ್ನಾಟಕದ ಅನ್ನ ತಿಂದು, ನೀರು ಕುಡಿದು ಉದ್ಧಟತನ ಪ್ರದರ್ಶಿಸಿರುವ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಗರದ ಚಾಲಕ ಮತ್ತು ಹಿಂದಿ ಭಾಷಿಗನ ನಡುವೆ, ಕನ್ನಡ ಭಾಷೆ ಮಾತನಾಡಲು ನಡೆದ ಬಿಸಿ ಬಿಸಿ ಚರ್ಚೆಯ ವಿಡಿಯೋ ಸೊಶೀಯಲ್ ಮಿಡೀಯಾದಲ್ಲಿ ವೈರಲ್ ಆಗಿ, ನಗರದಲ್ಲಿ ಭಾಷೆಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.
ವಿಡಿಯೋದಲ್ಲಿ ಏನಿದೆ?:
ಯುವತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡಿರುವ ಹೊರರಾಜ್ಯದ ವ್ಯಕ್ತಿಯು, ಇದು ಬೆಂಗಳೂರು ಇರಬಹುದು. ಕನ್ನಡ ಅಲ್ಲ, ಹಿಂದಿ ಮಾತನಾಡು ಎಂದು ಕನ್ನಡಿಗ ಕಾರು ಚಾಲಕನ ಜತೆಗೆ ಕಿರಿಕ್ ಮಾಡಿದ್ದಾನೆ. ಇದಕ್ಕೆ ಕಾರು ಚಾಲಕ, ನೀನು ಬೆಂಗಳೂರಿಗೆ ಬಂದಿರುವುದು. ನೀನು ಕನ್ನಡ ಮಾತನಾಡು. ನಾನು ಹಿಂದಿ ಮಾತನಾಡುವುದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಆ ಹೊರರಾಜ್ಯದ ವ್ಯಕ್ತಿ ಹಿಂದಿಯಲ್ಲಿ ಹೇಳು ಎಂದು ದುರಂಹಕಾರ ಪ್ರದರ್ಶಿಸಿರುವುದು ವಿಡಿಯೋದಲ್ಲಿ ಇದೆ.