ಗ್ರಾಮದಲ್ಲಿ ಎರಡು ನ್ಯಾಯ ಬೆಲೆ ಅಂಗಡಿ ತೆರಯಲು ಆಕ್ಷೇಪ ಅರ್ಜಿ ವಜಾಗೊಳಿಸಿದ ಹೈಕೋರ್ಟ್

highcourt
Published on

ಬೆಂಗಳೂರು: ದೇಶದ ನಾಗರೀಕರಿಗೆ ಅಗತ್ಯ ಸಾಮಗ್ರಿಗಳನ್ನು ಸುಲಭವಾಗಿ ಪೂರೈಕೆ ಮಾಡುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳು ಕಾರ್ಯಾಚರಿಸುತ್ತಿದೆ ಎಂದಿರುವ ಹೈಕೋರ್ಟ್, ಒಂದು ಗ್ರಾಮದಲ್ಲಿ ಮತ್ತೊಂದು ನ್ಯಾಯ ಬೆಲೆ ಅಂಗಡಿ ಆರಂಭಿಸುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೆ, ಪಡಿತರ ಚೀಟಿದಾರರಲ್ಲಿ ಅತಿ ಹೆಚ್ಚು ಜನರು ಸಮಾಜದಲ್ಲಿನ ಬಡ ವರ್ಗಕ್ಕೆ ಹಾಗೂ ಬಡತನ ರೇಖೆಗಿಂತ ಕೆಳಗಿನವರಿದ್ದಾರೆ ಎಂದು ಹೇಳಿದೆ.

ಪ್ರಕರಣ ಸಂಬಂಧ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಹಳ್ಳಿಯ ಮಹಾತ್ಮ ಗಾಂಧೀಜಿ ಗ್ರಾಮ ಹಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net