ನಕಲಿ ಕ್ಲಿನಿಕ್​ಗೆ ಬೀಗ ಹಾಕಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು

2
Published on

ಮುಳಬಾಗಿಲು: ನಗರ ಹೊರವಲಯದ ಗೂಕುಂಟೆ ರಸ್ತೆಯ ಚೆಲುವನಾಯಕನಹಳ್ಳಿ ಬಳಿ ಪ್ರಾವಿಷನ್​ ಸ್ಟೋರ್​ ಅಂಗಡಿ ಒಳಗೆ ಕುಮಾರ್​ ಎಂಬಾತ ಅನಧಿಕೃತವಾಗಿ ನಕಲಿ ಕ್ಲಿನಿಕ್​ ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ಸುಗುಣ ನೇತೃತ್ವದ ತಂಡ ಮಂಗಳವಾರ ದಾಳಿ ಮಾಡಿ ಬೀಗ ಹಾಕಿಸಿದೆ. ಈ ಹಿಂದೆಯೂ ಇದೇ ಕುಮಾರ್​ ನೂಗಲಬಂಡೆ ಬಡಾವಣೆಯಲ್ಲಿ ನಕಲಿ ಕ್ಲಿನಿಕ್​ ನಡೆಸುತ್ತಿದ್ದ ಆರೋಪದ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನೋಟಿಸ್​ ನೀಡಿ ಬಂದ್​ ಮಾಡಿಸಿದ್ದರೂ ಬೇರೊಂದು ಕಡೆ ಪ್ರಾವಿಷನ್​ ಸ್ಟೋರ್​ ನೆಪದಲ್ಲಿ ಕ್ಲಿನಿಕ್​ ನಡೆಸುತ್ತಿದ್ದ. ತಾಲೂಕು ಆರೋಗ್ಯ ಇಲಾಖೆ ವ್ಯವಸ್ಥಾಪಕ ರಾಜನಾರಾಯಣ, ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net