ಹುಲ್ಲೇಕೆರೆ ಶ್ರೀ ದೇವಮ್ಮದೇವಿ ಜಾತ್ರಾ ಮಹೋತ್ಸವ ವೈಭವ

IMG_20250427_161543
ಗಂಡಸಿ ಹೋಬಳಿಯ ಶಿಲ್ಪಕಲೆಯ ತವರೂರು ಹೊಯ್ಸಳರ ಕಾಲದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ನೆಲೆಬೀಡು ಹುಲ್ಲೇಕೆರೆ ಗ್ರಾಮದ ಶ್ರೀ ದೇವಮ್ಮದೇವಿ ಅವರ ರಥೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು.
Published on

ಗಂಡಸಿ: ಹೋಬಳಿಯ ಶಿಲ್ಪಕಲೆಯ ತವರೂರು ಹೊಯ್ಸಳರ ಕಾಲದ ಶ್ರೀ ಚನ್ನಕೇಶ್ವರಸ್ವಾಮಿ ದೇವಾಲಯದ ನೆಲೆಬೀಡು ಹುಲ್ಲೇಕೆರೆ ಶ್ರೀ ದೇವಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ವೈಭವದಿಂದ ಜರುಗಿತು.

ಜಾತ್ರೋತ್ಸವದಲ್ಲಿ ಮನಸೂರೆಗೊಳ್ಳುವ ಅರೆ, ತಮಟೆ, ನಗಾರಿ, ಕಹಳೆ ವಾದ್ಯಗೋಷ್ಠಿಗಳ ನಾದಕ್ಕೆ ಯುವಕರು ಹೆಜ್ಜೆ ಹಾಕಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಹುಲ್ಲೇಕೆರೆ, ಚನ್ನನಾಯಕನಹಳ್ಳಿ, ಕಾಡಯ್ಯನ ಕೊಪ್ಪಲು, ಈಡಿಗರಹಟ್ಟಿ, ನಾರಮ್ಮನಹಳ್ಳಿ, ಮೇಗಲ ಕೊಪ್ಪಲು, ಗೌರಮ್ಮನಕಟ್ಟೆ ಗ್ರಾಮಗಳಲ್ಲಿ ಮಾವಿನ ತಳಿರು, ತೋರಣ, ಬಾಳೆಕಂದು ವಿದ್ಯುತ್ ದ್ವೀಪಗಳ ಅಲಂಕಾರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳು ಕಂಗೊಳಿಸುತ್ತಿದ್ದವು ರಥಕ್ಕೆ ವರ್ಣರಂಜಿತ ಪಟಗಳು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ವಿರಾಜಮಾನಾಳಾಗಿ ಶ್ರೀ ದೇವಮ್ಮದೇವಿ ಉತ್ಸವ ಮೂರ್ತಿಯನ್ನು ಕಣ್ತುಂಬಿ ಕೊಂಡ ಭಕ್ತ ಸಾಗರ ಧೂಪ ಹಾಕಿ, ಹಣ್ಣು, ದವನ ರಥಕ್ಕೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಅಮ್ಮನವರ ಮೂಲಸ್ಥಾನದಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿದ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದ ಬಳಿಗೆ ಕರೆತಂದು ಪ್ರದಕ್ಷಿಣೆ ಹಾಕಿ ರಥದ ಮೇಲೆ ಕೂರಿಸಲಾಯಿತು. ರಥಕ್ಕೆ ಬಲಿ ಪ್ರಧಾನ ಕಾರ್ಯ ನಡೆಸಿ ಮಧ್ಯಾಹ್ನ 2 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಸಾಗರ ಜಯಘೋಷಗಳೊಂದಿಗೆ ಭಕ್ತಿ-ಭಾವದಿಂದ ರಥ ಎಳೆಯುವ ಮೂಲಕ ಪುನೀತರಾದರು. ರಥೋತ್ಸವದ ಪ್ರಯುಕ್ತ ಜಾತ್ರಾ ಮೈದಾನದಲ್ಲಿ ಮಜ್ಜಿಗೆ, ಪಾನಕ ಫಲಹಾರ, ಲಘು ಉಪಹಾರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net