

ಕೋಲಾರ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿರುವ ವಿಚಾರವು ಬಿಪಿ ಏರಿಸುತ್ತಿದೆ. ಸರ್ಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚು ಮಾಡುವುದೇ ಕೆಲಸವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಪಿಎಲ್ ಕಾರ್ಡ್ ನೀಡುತ್ತಿರುವುದೇ ಬಡತನ ರೇಖೆಗಿಂತ ಕೆಳಗಿರುವವರಿಗೆ. ಕಾರ್ಡ್ ವಿತರಣೆ ಮಾಡುವುದಕ್ಕಿಂತ ಮುನ್ನ ಮಾನದಂಡಗಳನ್ನು ನೋಡಿರುವುದಿಲ್ಲವೇ ಎಂದು ಪ್ರಶ್ನಿಸಿದರು.
ಈಗಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಸರ್ಕಾರದ ಯೋಜನೆ ದುರುಪಪಡಿಸಿಕೊಳ್ಳುತ್ತಿದೆ. ಹಿಂದೆ ಉಮೇಶ್ ಕತ್ತಿಯವರೆ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಇವತ್ತು ಕೂಲಿ ಮಾಡುವವರು ಸಹ ಒಂದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಸಮೃದ್ಧಿಯಾದ ಜೀವನ ನಡೆಸುತ್ತಿದ್ದಾರೆ. ಸ್ಥಿತಿವಂತರಾಗಿ ಕಾಣದ ಮಾತ್ರಕ್ಕೆ ಪಿಬಿಎಲ್ ರದ್ದುಗೊಳಿಸುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಜನರಿಗೆ ಬಿಪಿಎಲ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಬಿಪಿಎಲ್ನಿಂದ ಎಪಿಎಲ್ ಮಾಡಬೇಕಾದೆರ ಸರಿಯಾದ ನೀತಿ ನಿಯಮಗಳನ್ನ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಅವರ ನಿಲುವೆ ಬೇರೆ ಆಗಿದ್ದು, ರಾಜಕೀಯವಹಿಸಿ ಮಾತನಾಡುವುದಿಲ್ಲ ಎಂದು ಹೇಳಿದರು.