ವೈಭವದ ಚಾಮುಂಡೇಶ್ವರಿ ವರ್ಧಂತಿ

Oplus_16908288
ನಂಜನಗೂಡಿನ ನೆಹರು ಸರ್ಕಲ್‌ನಲ್ಲಿ ರಸ್ತೆಬದಿ ವ್ಯಾಪಾರಸ್ಥರಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯನ್ನು ಶುಕ್ರವಾರ ಆಚರಿಸಲಾಯಿತು.
Published on

ನಂಜನಗೂಡು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಸ್ತೆಬದಿ ವ್ಯಾಪಾರಸ್ಥರು, ಆಟೋ ಚಾಲಕ ಸಂಘ, ತಳ್ಳುವ ಗಾಡಿ, ಎಳನೀರು ವ್ಯಾಪಾರಸ್ಥರು ಸೇರಿ 14 ನೇ ವರ್ಷದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ಗುರುವಾರ ನಗರದ ನೆಹರು ಸರ್ಕಲ್ ನಲ್ಲಿ ಆಚರಿಸಿದರು.

ಬೆಳಗ್ಗೆಯಿಂದಲೇ ಶ್ರೀ ಚಾಮುಂಡೇಶ್ವರಿ ಅಮ್ಮನವರ ಭಾವಚಿತ್ರಕ್ಕೆ ಬಣ್ಣ ಬಣ್ಣದ ಹೂ, ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆಗಳನ್ನು ನೀಡಿದರು.

ರಸ್ತೆಬದಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಗಜೇಂದ್ರ ಮಾತನಾಡಿ, ಸಮಸ್ತ ನಾಡಿನ ಜನತೆಗೆ ಚಾಮುಂಡೇಶ್ವರಿ ವರ್ಧಂತಿ ಶುಭಾಶಯಗಳು ಕೋರಿದರು. ಮಹಿಳೆಯರಿಗೆ ಚಾಮುಂಡೇಶ್ವರಿ ತಾಯಿ ಹೆಚ್ಚಿನ ಶಕ್ತಿ ನೀಡಲಿ ಎಂದರು. ಪ್ರತಿ ವರ್ಷ ರಸ್ತೆಬದಿ ವ್ಯಾಪಾರಸ್ಥರು, ಆಟೋ ಚಾಲಕರು, ತಳ್ಳುವ ಗಾಡಿ ಎಳನೀರು, ಹೂವಿನ ವ್ಯಾಪಾರಸ್ಥರು, ಅಂಗಡಿಗಳ ಮಾಲೀಕರು ಸೇರಿದಂತೆ ಒಗ್ಗಟ್ಟನಿಂದ 5000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ವಿಜಯ್, ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಯು ಎನ್ ಪದ್ಮನಾಭರಾವ್, ಕಾಂಪೋಸ್ಟ್ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ನಗರಸಭೆ ಸದಸ್ಯರಾದ ಮಹದೇವ ಪ್ರಸಾದ್, ಪ್ರದೀಪ್, ನಗರಸಭೆ ಅಧಿಕಾರಿಗಳು ಸೇರಿದಂತೆ ರಸ್ತೆಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅರಸು, ಸದಸ್ಯರಾದ ರಾಮಣ್ಣ, ಕಿಟ್ಟಿ, ತರಕಾರಿ ಕುಮಾರ್, ವಿಜ್ಞೇಶ್, ತರಕಾರಿ ಮನೋಜ್, ಆಟೋ ಕುಮಾರ್, ಸುನಿಲ್, ಮಹೇಂದ್ರ, ಜೈಕುಮಾರ್,ಪ್ರವೀಣ್, ರಮೇಶ್ ಸ್ವಾಮಿ,ಕೌಶಿಕ್, ಚಂದ್ರು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net