ಬಾಲಕಿ ಮೇಲೆ ಶಿಕ್ಷಕಿಯಿಂದ ಲೈಂಗಿಕ ದೌರ್ಜನ್ಯದ ಆರೋಪ

Crime Logo
Published on


ಬೆಂಗಳೂರು: ಮೂರು ವರ್ಷದ ಬಾಲಕಿಯ ಮೇಲೆ ಶಾಲೆಯ ಶಿಕ್ಷಕಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಬಾಲಕಿಯ ಪಾಲಕರು ನೀಡಿದ ದೂರಿನನ್ವಯ ಕೆ.ಜಿ.ಹಳ್ಳಿಯ ವೆಂಕಟೇಶ್ವರಪುರದ ಅನ್ವರ್ ಲೇಔಟ್‌ನಲ್ಲಿರುವ ಶಾಲೆಯ ಶಿಕ್ಷಕಿಯೊಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪವೇನು?
ಅನ್ವರ್ ಲೇಔಟ್‌ನಲ್ಲಿರುವ ಖಾಸಗಿ ಶಾಲೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಜೂ.೬ರಿಂದ ಶಾಲೆಗೆ ಹೋಗಲಾರಂಭಿಸಿದ್ದಳು ೧೦ ದಿನಗಳ ಬಳಿಕ, ’ತಾನು ಶಾಲೆಗೆ ಹೋಗುವುದಿಲ್ಲ’ ಎಂದು ಪಾಲಕರ ಬಳಿ ಹೇಳಿಕೊಂಡಿದ್ದಾಳೆ. ಏನಾಯಿತು ಎಂದು ಪಾಲಕರು ವಿಚಾರಿಸಿದಾಗ, ’ಶಾಲೆಯಲ್ಲಿರುವ ಶಿಕ್ಷಕಿಯೊಬ್ಬರು ತನ್ನ ಖಾಸಗಿ ಅಂಗಗಳಿಗೆ ನೋವು ಉಂಟು ಮಾಡುತ್ತಾರೆ ಎಂದು ಬಾಲಕಿ ತನ್ನ ಪಾಲಕರ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣ ಪಾಲಕರು ಮಗಳನ್ನ ಪರಿಶೀಲಿಸಿದಾಗ ಆಕೆಯ ಖಾಸಗಿ ಅಂಗಗಳು ಕೆಂಪುಗಟ್ಟಿದ್ದು, ರಕ್ತ ಬಂದಿರುವುದು ಪತ್ತೆಯಾಗಿದೆ. ಶಿಕ್ಷಕಿಯ ಹೆಸರನ್ನು ವಿಚಾರಿಸಿದಾಗ, ಹೆಸರು ಗೊತ್ತಿರದ ಬಾಲಕಿ ’ಮ್ಯಾಮ್.’ ಎಂದು ಪಾಲಕರ ಬಳಿ ಹೇಳಿದ್ದಾಳೆ.
ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವ ಪಾಲಕರು, ಸದ್ಯ ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಶಿಕ್ಷಕಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net