ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಬ್ರೇಕ್​

ganesha
Published on

ಬೆಂಗಳೂರು: ಗಣೇಶ ಹಬ್ಬ ಅಂದ್ರೆ ತಿಂಗಳಾನುಗಟ್ಟಲೇ ಸಡಗರ, ಸಂಭ್ರಮ ಕಳೆಗಟ್ಟಲಿದೆ. ಅಲ್ಲಿ ಇಡೀ ಏರಿಯಾ ಇಲ್ಲವೇ ಊರಿಗೆ ಊರೇ ಒಟ್ಟುಗೂಡಿ ವಿನಾಯಕನಿಗೆ ಪೂಜೆ ಮಾಡಲಿದೆ. ಆದರೀಗ ಈ ಉತ್ಸವಕ್ಕೆ ಕರೊನಾ ಛಾಯೆ ಆವರಿಸಿದ್ದು, ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್​ ಹಾಕಿದೆ.

ಕರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರಿ ಯಾವುದೇ ಹಬ್ಬ ಆಚರಣೆ ಮಾಡುವುದು ಸರಿಯಲ್ಲ. ಅದ್ದೂರಿಯಾಗಿ ಗಣೇಶೋತ್ಸವ ಆಚರಿಸುವುದು ಬೇಡ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು. ಮನೆಗಳಲ್ಲಿಯೇ ಹಬ್ಬ ಆಚರಿಸಲು ಮಾಹಿತಿ ಹಾಗೂ ಸೂಕ್ತ ನಿರ್ದೇಶನ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕರೊನಾ ಸಂಕಷ್ಟಕ್ಕೆ ಇಲುಕಿರುವ ರಾಜ್ಯವನ್ನು ವಿಘ್ನ ವಿನಾಶಕನೇ ಕಾಪಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net