ನ್ಯಾಯಾಲಯದ ಆವರಣಕ್ಕೆ ಓಡಿ ಬಂತು ನರಿ...! ಬಲೆ ಹಾಕಿ ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಪ್ರಾಣಿ ರಕ್ಷಕ

Fox 9 Jan 20
Published on

ವಿಜಯಪುರ: ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣಕ್ಕೆ ನರಿಯೊಂದು ಆಗಮಿಸಿ ಅಚ್ಚರಿ ಮೂಡಿಸಿತು.

ಆವರಣಕ್ಕೆ ಬಂದು ಏನು ಮಾಡಬೇಕು ಎಂದು ತಿಳಿಯದೆ ಓಡುತ್ತಿದ್ದ ನರಿಯನ್ನು ನೋಡಿ ನ್ಯಾಯಾಲಯದಲ್ಲಿದ್ದ ವಕೀಲರು, ಜನರು ಆಶ್ಚರ್ಯ ವ್ಯಕ್ತಪಡಿಸಿದರು.

ಬಳಿಕ ಪ್ರಾಣಿ ರಕ್ಷಕ ಕಲ್ಮೇಶ್​ ಆಳೂರು ಅವರು ನರಿಯನ್ನು ಬಲೆ ಹಾಕಿ ಹಿಡಿದು ಅರಣ್ಯಾಧಿಕಾರಿಗಳ ಸುಪರ್ದಿಗೆ ನೀಡಿದರು. ಅಧಿಕಾರಿಗಳು ನರಿಯನ್ನು ಡೋಣಿ ನದಿಯ ತಟದಲ್ಲಿ ಬಿಟ್ಟು ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net