

ಬೆಂಗಳೂರು: ದೇಶವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾ ಈಗ ಖಾಕಿಪಡೆಯ ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿದ್ದು, ಮತ್ತಷ್ಟು ಆತಂಕ ತಂದೊಡ್ಡಿದೆ.
ಶುಕ್ರವಾರ ರಾತ್ರಿ ಮನೆಯ ಶೌಚಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟ ವೈಟ್ಫೀಲ್ಡ್ ಪೊಲೀಸ್ ಠಾಣೆಯ ಎಎಸ್ಐ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ. ಇದನ್ನೂ ಓದಿರಿ ಸೈಕಲ್ ಏರಲಿದ್ದಾರೆ ಕಾಂಗ್ರೆಸ್ ನಾಯಕರು!
ಮೊನ್ನೆ ರಾತ್ರಿ ಟಾಯ್ಲೆಟ್ನಲ್ಲೇ ನಿತ್ರಾಣವಾಗಿ ಬಿದ್ದ 57 ವರ್ಷದ ಎಎಸ್ಐ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದರು.
ಇದೀಗ ಸ್ವ್ಯಾಬ್ ಟೆಸ್ಟ್ನಲ್ಲಿ ಮೃತ ಎಎಸ್ಐಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ನಾಲ್ವರು ಪೊಲೀಸರು ಕರೊನಾಗೆ ಬಲಿಯಾಗಿದ್ದಾರೆ.