

| ರಮೇಶ ದೊಡ್ಡಪುರ ಬೆಂಗಳೂರು
ಭಾರತದಿಂದ ಬ್ರಿಟಿಷರನ್ನು ಓಡಿಸಲು ಹಾಗೂ ಜನರನ್ನು ಸ್ವಾವಲಂಬಿಯಾಗಿಸಲು ಗಾಂಧಿಜೀ ಕಂಡುಕೊಂಡ ಸೂತ್ರ ಖಾದಿ. ಅತ್ಯಂತ ಸರಳ ಹಾಗೂ ಭಾರತೀಯ ಜೀವನ ಪದ್ಧತಿಯ ಅವಿಭಾಜ್ಯ ಅಂಗವಾಗಿದ್ದ ಖಾದಿಯನ್ನೇ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿಸಿ ಜನಜಾಗೃತಿಯಲ್ಲಿ ತೊಡಗಿದ್ದರಿಂದ ಬಹುದೊಡ್ಡ ಕ್ರಾಂತಿಯೇ ಆಯಿತು. ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಗಳು, ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆ ಪೂರೈಸಬೇಕು ಎಂಬ ನೆಪದಲ್ಲಿ ರಾಸಾಯನಿಕಯುಕ್ತ ಹಾಗೂ ಪರಿಸರಸ್ನೇಹಿಯಲ್ಲದ ಬಟ್ಟೆಗಳ ಉತ್ಪಾದನೆ ಮಿತಿ ಮೀರಿದೆ. ಇತ್ತೀಚಿನ ದಶಕಗಳಲ್ಲಿ ಖಾದಿಗೆ ಮತ್ತೆ ಬೇಡಿಕೆ ಬಂದಿದ್ದು, ಖಾದಿ ಬ್ರಾ್ಯಂಡ್ ಮೌಲ್ಯ ಹೆಚ್ಚುತ್ತಿದೆ. ಇದೇ ವೇಳೆಯಲ್ಲಿ ಉದ್ಯೋಗ ನಷ್ಟದ ಮಾತೂ ಕೇಳಿಬರುತ್ತಿದೆ.
ಉತ್ಪಾದಕರಿಗೆ ತರಬೇತಿ: ಖಾದಿ ಹಾಗೂ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ತರಬೇತಿಗಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೇಂದ್ರ ಸರ್ಕಾರದ ಕೆವಿಐಸಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ.ಕರ್ನಾಟಕ ಖಾದಿ ಬ್ರಾ್ಯಂಡಿಂಗ್ ಕುರಿತು ಟೇಲರ್ಗಳಿಗೆ ತರಬೇತಿ, ಉದ್ಯಮ ಸ್ಥಾಪನೆಗೆ 10 ಲಕ್ಷ ರೂ.ವರೆಗೆ ಸಾಲ ಸೇರಿ ಅನೇಕ ಯೋಜನೆಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ಖಾದಿ ಭವನ, ನಂ.10, ಜಸ್ಮಾ ಭವನ ರಸ್ತೆ, ಬೆಂಗಳೂರು-52, ದೂ: 08022266852, 22643439,22643445, ಇಮೇಲ್:kvibdopmegp@gmail.com ಸಂಪರ್ಕಿಸಬಹುದು. ಕೆವಿಐಸಿ ಇತ್ತೀಚೆ ಗಷ್ಟೆ ಹಸುವಿನ ಸಗಣಿಯಿಂದ ಖಾದಿ ಪ್ರಾಕೃತಿಕ ಪೇಂಟ್ ಪರಿಚಯಿಸಿದೆ. ಈ ಬಣ್ಣವು ಸಂಪೂರ್ಣ ನೈಸರ್ಗಿಕ, ರಾಸಾಯನಿಕರಹಿತ ಹಾಗೂ ಬ್ಯಾಕ್ಟೀರಿಯಾ ನಿರೋಧಕವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದು, ಬಣ್ಣದ ತಯಾರಿಕೆ ಹಾಗೂ ಮಾರುಕಟ್ಟೆ ಕುರಿತು ತರಬೇತಿ ಆಯೋಜಿಸಲಾಗಿದೆ. ಶುಲ್ಕವನ್ನು ಹೊಂದಿರುವ 5 ದಿನದ ತರಬೇತಿ ಕಾರ್ಯಕ್ರಮಗಳನ್ನು ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್ವೆುೕಡ್ ಪೇಪರ್ ಇನ್ಸ್ಟಿಟ್ಯೂಟ್ನಲ್ಲಿ(ಕೆಎನ್ಎಚ್ಪಿಐ) ನೀಡಲಾಗುತ್ತಿದೆ. ಇದರ ಜತೆಗೆ ಇತರೆ ತರಬೇತಿಗಳೂ ಇದ್ದು, ಹೆಚ್ಚಿನ ಮಾಹಿತಿಗೆ ದೂ: 01412947819 ಹಾಗೂ ಇಮೇಲ್:knhpijaipur@gmail.com ಸಂಪರ್ಕಿಸಬಹುದು.