ಇನ್ನೆರಡು ದಿನದಲ್ಲಿ ಕಲಬುರಗಿ-ಮುಂಬೈ ನಡುವೆ ವಿಮಾನ ಹಾರಾಟ ಶುರು

Star Air
Published on

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಿಂದ ಕಲಬುರಗಿ-ಮುಂಬೈ (ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ) ನಡುವೆ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ‌ ಮುಂದಾಗಿದ್ದು, ಟಿಕೆಟ್​ ಬುಕ್ಕಿಂಗ್ ಆರಂಭಗೊಂಡಿದೆ.

ಸ್ಟಾರ್ ಏರ್ ಸಂಸ್ಥೆಯು ಪ್ರತಿ ಶನಿವಾರದಂದು ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದೆ. ಇದೇ ಜೂನ್ 13ರಂದು ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಕಲಬುರಗಿ-ಮುಂಬೈ ನಡುವೆ ಸಂಸ್ಥೆಯ ವಿಮಾನ ಸಂಚರಿಸಲಿದೆ.

OG-118 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆಳಗ್ಗೆ 10.20ಕ್ಕೆ ಹೊರಟು 11.25ಕ್ಕೆ ಬೆಂಗಳೂರು ತಲುಪಲಿದೆ. ಇದೇ ವಿಮಾನ OG-105 ಸಂಖ್ಯೆಯೊಂದಿಗೆ ಮಧ್ಯಾಹ್ನ 1ಕ್ಕೆ ಬೆಳಗಾವಿಗೆ ಹಾಗೂ OG-111 ಸಂಖ್ಯೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.40ಕ್ಕೆ ಲ್ಯಾಂಡ್ ಆಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net