ಶಿವಮೊಗ್ಗದ ಮೊದಲ ರೈಲ್ವೆ ಅಂಡರ್‌ಪಾಸ್ ಸಂಚಾರ ಮುಕ್ತ

underpass
ಶಿವಮೊಗ್ಗ ಪಿ ಆ್ಯಂಡ್ ಟಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಎಸ್.ದತ್ತಾತ್ರಿ, ಜಗದೀಶ್, ಸುನೀತಾ ಅಣ್ಣಪ್ಪ, ಇ.ವಿಶ್ವಾಸ್, ಆಶಾ ಚನ್ನಬಸಪ್ಪ ಇತರರಿದ್ದರು.
Published on

ಶಿವಮೊಗ್ಗ: ನಗರದ ಪಿ ಆ್ಯಂಡ್ ಟಿ ಬಡಾವಣೆಯಲ್ಲಿ ನಿರ್ಮಿಸಿರುವ ಶಿವಮೊಗ್ಗದ ಮೊದಲ ರೈಲ್ವೆ ಅಂಡರ್‌ಪಾಸ್‌ನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದ್ದಾರೆ. ಇದರೊಂದಿಗೆ ಕೆಲ ವರ್ಷದ ಬಳಿಕ ಸಾರ್ವಜನಿಕರು ಮುಕ್ತವಾಗಿ ಈ ಮಾರ್ಗದಲ್ಲಿ ಸಂಚರಿಸಲು ಅನುಕೂಲವಾದಂತಾಗಿದೆ.

ಸೋಮಿನಕೊಪ್ಪ ರೈಲ್ವೆ ಗೇಟ್‌ನಲ್ಲಿ ಮೇಲ್ಸೇತುವೆ ನಿರ್ಮಾಣವಾಗುವ ಮುನ್ನವೇ ಪಿ ಆ್ಯಂಡ್ ಟಿ ಬಡಾವಣೆಗೆ ತೆರಳುವ ಮಾರ್ಗವನ್ನು ಕಂಬಿ ಮೂಲಕ ಬಂದ್ ಮಾಡಲಾಗಿತ್ತು. ಹೀಗಾಗಿ ಅಲ್ಲಿಗೆ ತೆರಳುವ ಸಾರ್ವಜನಿಕರು ಸೋಮಿನಕೊಪ್ಪ ರೈಲ್ವೆ ಗೇಟ್‌ಗೆ ತೆರಳಿ ಅಲ್ಲಿಂದ ಕನಕ ನಗರದ ಮೂಲಕವೇ ಸಾಗಬೇಕಿತ್ತು. ಇದರಿಂದ ಜನರಿಗೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಪ್ರತಿ ದಿನ ಶಾಲಾ, ಕಾಲೇಜು, ಕಚೇರಿಗೆ ತೆರಳುವವರಿಗೆ ಸಮಸ್ಯೆಯಾಗಿತ್ತು. ಸೋಮಿನಕೊಪ್ಪದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭದ ಸಂದರ್ಭದಲ್ಲೇ ಪಿ ಅಂಡ್ ಟಿ ಬಡಾವಣೆ ಅಂಡರ್‌ಪಾಸ್ ನಿರ್ಮಾಣಕ್ಕೂ ಚಾಲನೆ ನೀಡಲಾಗಿತ್ತು. ಒಂದೇ ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಂಡು ಗುರುವಾರ ಸಾರ್ವಜನಿಕರಿಗೆ ಅಧಿಕೃತವಾಗಿ ಮುಕ್ತವಾಗಿದೆ.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಭಾಗದಲ್ಲಿ ಬೀದಿ ದೀಪದ ಸಮಸ್ಯೆಯಿದೆ. ಅಂಡರ್‌ಪಾಸ್‌ಗೆ ಪೂರಕವಾಗಿ ವಿದ್ಯುತ್ ದೀಪ ಅಳವಡಿಸಬೇಕಿದೆ. ಈ ಸಂಬಂಧ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ದೀಪದ ಸಮಸ್ಯೆಯನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ನಗರ ಪಾಲಿಕೆ ಸದಸ್ಯರಾದ ಆಶಾ ಚನ್ನಬಸಪ್ಪ, ಸುನೀತಾ ಅಣ್ಣಪ್ಪ, ಇ.ವಿಶ್ವಾಸ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಎಸ್.ದತ್ತಾತ್ರಿ, ಕೆ.ವಿ.ಅಣ್ಣಪ್ಪ, ಮಾಲತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net