ಅಯೋಧ್ಯೆಗೆ ಪ್ರಥಮ ಪ್ರಾಶಸ್ತ್ಯ

Ayodhya 111
Published on

ಮರ್ಯಾದಾ ಪುರುಷೋತ್ತಮ ನಮ್ಮ ರಾಮಲಲ್ಲಾನಿಗೊಂದು ಮಂದಿರ ನಿರ್ಮಾಣ ಮಾಡುವ ಸಂಕಲ್ಪದ ಭೂಮಿಪೂಜೆಯ ಶುಭಘಳಿಗೆ 2020ರ ಆಗಸ್ಟ್ 5ರಂದು ಕೂಡಿಬಂದಿದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಅಂದು ಸಂಭ್ರಮ ಮನೆಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಏಕೆಂದರೆ ರಾಮನ ಆದರ್ಶ ಜಗತ್ತಿನಲ್ಲೆಲ್ಲಾ ಪಸರಿಸಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ರಾಮಾಯಣವಿದೆ, ರಾಮನಿದ್ದಾನೆ. ಥೈಲ್ಯಾಂಡ್ ದೇಶದಲ್ಲಂತೂ ಅಲ್ಲಿನ ರಾಜನನ್ನೂ ‘ರಾಮನೆಂದೇ’ ಸಂಬೋಧಿಸುತ್ತಾರೆ. ಇಂಡೋನೇಷಿಯಾದಲ್ಲಿ ರಾಮಾಯಣದ ಬ್ಯಾಲೆ ನಡೆಯುತ್ತದೆ. ಹೀಗಿರುವಾಗ ಒಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗುತ್ತಿರುವ ನಾವೆಲ್ಲರೂ ಧನ್ಯರಲ್ಲವೇ !

ಭರತ ಖಂಡದಲ್ಲಿ ಲಕ್ಷಾಂತರ ಶ್ರೀರಾಮನ ದೇಗುಲಗಳಿದ್ದರೂ ಪ್ರಪಂಚದಾದ್ಯಂತ ರಾಮಾಯಣ ಸಂಬಂಧಿತ ವಿಚಾರಗಳಿದ್ದರೂ, ಹಲವು ದೇಶಗಳಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟ ಅನೇಕ ಸ್ಮಾರಕಗಳಿದ್ದರೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್ ನಿರ್ಮಾಣ ಏಕೆ ಹೆಚ್ಚು ಪ್ರಸ್ತುತವೆನಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ‘ಅಯೋಧ್ಯಾ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತಿಕಾ, ಪುರಿದ್ವಾರಾವತೀ, ಚೈವ, ಸಪೆôತಾ ಮೋಕ್ಷದಾಯಿಕಾ’... ಸಪ್ತ ಮೋಕ್ಷದಾಯಕ ನಗರಗಳಲ್ಲಿ ಅಯೋಧ್ಯೆಗೆ ಪ್ರಥಮ ಪ್ರಾಶಸ್ಱ. ಈ ನಗರಗಳ ಹೆಸರು ಹೇಳುವುದರಿಂದಲೇ ಮೋಕ್ಷ ದೊರೆಯುತ್ತದೆ ಎಂದು ಭಾರತೀಯರು ನಂಬುತ್ತಾರೆ. ಇನ್ನು ಶ್ರೀರಾಮನ ಜನನಾನಂತರದಲ್ಲಂತೂ ಅದು ಪುಣ್ಯಕ್ಷೇತ್ರವೇ ಆಯಿತು.

ಮಹಾತ್ಮಾಗಾಂಧಿ ಅವರು ರಾಮರಾಜ್ಯದ ಕನಸನ್ನು ಕಂಡಿದ್ದವರು, ಭಾರತದಲ್ಲಿ ರಾಮರಾಜ್ಯ ಸ್ಥಾಪನೆ ನನ್ನ ಅಂತಿಮಗುರಿ ಎಂದು ಸಾರಿದವರು, ರಾಮಧ್ಯಾನ್ ಅವರ ನಿತ್ಯ ಪ್ರಾರ್ಥನೆಯಾಗಿತ್ತು. ರಾಮನ ಆದರ್ಶ ಅವರಲ್ಲಿ ಹಾಸುಹೊಕ್ಕಾಗಿತ್ತು. ಹೀಗಾಗಿ ಅವರು ಸದಾಕಾಲ ರಾಮಧ್ಯಾನದಲ್ಲೇ ಮುಳುಗಿರುತ್ತಿದ್ದರು. ಹಜ್​ಯಾತ್ರೆ ಮುಗಿಸಿಬಂದ ಮುಸಲ್ಮಾನ ವ್ಯಕ್ತಿ ತನ್ನ ಜನ್ಮಸಾರ್ಥಕವಾಯಿತು ಎನ್ನುತ್ತಾನೆ. ತನ್ನ ಜೀವನದ ಅಮೂಲ್ಯ ಕ್ಷಣವೆಂದರೆ ವ್ಯಾಟಿಕನ್ ಚರ್ಚ್​ನಲ್ಲಿ ಪ್ರಾರ್ಥನೆ ಸಲ್ಲಿಸುವುದೆಂದು ಕ್ರಿಶ್ಚಿಯನ್ನನೊಬ್ಬ ಭಾವಿಸುವಂತೆ ಈ ಮೋಕ್ಷದಾಯಕ ನಗರ ದರ್ಶನ ತನಗೆ ಪುನರ್ಜನ್ಮರಹಿತ ಶಾಶ್ವತ ಲೋಕವನ್ನು ಕೊಡುತ್ತದೆ ಎಂದು ಹಿಂದುವೊಬ್ಬ ನಂಬುತ್ತಾನೆ.

ಸ್ತ್ರೀ, ಗೋವು, ಮಠಗಳು ಹಾಗೂ ಮಂದಿರಗಳನ್ನು ಶ್ರದ್ಧಾ ಕೇಂದ್ರಗಳೆಂದು ಹಿಂದುಗಳು ಭಾವಿಸುತ್ತಾರೆ. ಅವುಗಳ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇದನ್ನು ಅರಿತಿದ್ದ ವಿದೇಶಿ ಆಕ್ರಮಣಕಾರರು ಅವುಗಳನ್ನೇ ಗುರಿಯಾಗಿಸಿಕೊಂಡು ಆಕ್ರಮಣ ಮಾಡುತ್ತಿದ್ದರು. ತನ್ನ ಶ್ರದ್ಧೆಗೆ ಪೆಟ್ಟು ಬಿದ್ದಾಗ ಯಾವುದೇ ಸ್ವಾಭಿಮಾನಿ ಅದನ್ನು ವಿರೋಧಿಸುತ್ತಾನೆ, ಆಗ ಸಹಜವಾಗಿಯೇ ಸಂಘರ್ಷ ಏರ್ಪಡುತ್ತದೆ. ತಾನು ಅದರ ಲಾಭವನ್ನು ಪಡೆದುಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರವಾಗಿರುತ್ತದೆ. ಭಾರತದಲ್ಲಿ ದೇವಾಲಯಗಳ ಮೇಲೆ ನಡೆದ ಆಕ್ರಮಣಗಳು ಅಲ್ಲಿದ್ದ ಸಂಪತ್ತಿಗಾಗಿ ಎಂದು ಹೇಳಲಾಗುತ್ತಿದ್ದರೂ ಅದೊಂದೇ ಕಾರಣವಾಗಿರಲಿಲ್ಲ ಎಂಬುದು ಕಟು ಸತ್ಯ. ಅಂತಹುದೇ ಒಂದು ಆಕ್ರಮಣ ಅಯೋಧ್ಯೇಯ ಶ್ರೀರಾಮಮಂದಿರದ ಮೇಲಾದದ್ದು. ನಂತರದಲ್ಲಿ ಅಲ್ಲಿ ಮಂದಿರ ನಿರ್ವಣದ ಹಲವಾರು ಪ್ರಯತ್ನಗಳು ನಡೆದವಾದರೂ ಫಲನೀಡಲಿಲ್ಲ. ಬ್ರಿಟಿಷರಂತೂ ಈ ಸಂದರ್ಭದ ಲಾಭವನ್ನು ದುರುಪಯೋಗಪಡಿಸಿಕೊಂಡು ಅಲ್ಲಿದ್ದ ಹಿಂದು-ಮುಸಲ್ಮಾನರನ್ನು ಪರಸ್ಪರ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಂಡರು. ಸಮಸ್ಯೆ ಪರಿಹರಿಸಬಹುದಾದ ಸಂದರ್ಭಗಳನ್ನೆಲ್ಲಾ ಸಮಸ್ಯೆ ಇನ್ನಷ್ಟು ಜಟಿಲವಾಗುವಂತೆ ಮಾಡುವಲ್ಲಿ ಸಫಲರಾದರು.

ಸ್ವಾತಂತ್ರ್ಯೂರ್ವದಲ್ಲಿ ಮಂದಿರದ ರಕ್ಷಣೆಗಾಗಿ ಹಲವಾರು ಹೋರಾಟಗಳು ಸ್ಥಳೀಯವಾಗಿ ನಡೆಯುತ್ತಲೇ ಇದ್ದವು. ಅದನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು. ಹಲವರ ಪ್ರಾಣ ಹರಣವಾದರೂ ಸಮಸ್ಯೆ ಬಗೆಹರಿಯಲಿಲ್ಲ. ಸ್ವಾತಂತ್ರ್ಯಾನಂತರ ಸಮಸ್ಯೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳುತ್ತ್ತಾ ಅದರಲ್ಲಿ ರಾಜಕೀಯವೂ ಸೇರಿದ ಮೇಲೆ ಮತ್ತಷ್ಟು ಕಗ್ಗಂಟಾಯಿತು. ಈ ನಡುವೆ ನ್ಯಾಯಾಲಯದಲ್ಲಿ ಹೋರಾಟ ನಿರಂತರವಾಗಿತ್ತು. ಉತ್ತರ ಪ್ರದೇಶದ ಸರ್ಕಾರಗಳ ರಚನೆ ಹಾಗೂ ಪತನದಲ್ಲಿ ಇದು ಪ್ರಮುಖ ಪಾತ್ರವಹಿಸಿತು. ಅಲ್ಲಿಯವರೆಗೂ ಧಾರ್ವಿುಕ ಹಾಗೂ ಸ್ಥಳೀಯ ಹೋರಾಟವಾಗಿದ್ದುದು ಕ್ರಮೇಣ ದೇಶಾದ್ಯಂತ ಜನಾಂದೋಲನವಾಗಿ ರೂಪುಗೊಂಡಿತು.

ದ್ವಾದಶ ಜೋತಿರ್ಲಿಂಗಗಳಲ್ಲಿ ಒಂದಾಗಿದ್ದ ಸೌರಾಷ್ಟ್ರ (ಗುಜರಾತ್) ದ ಸೋಮನಾಥನಿಗೆ ಹತ್ತಿದ್ದ ಇದೇ ರೀತಿಯ ಕಳಂಕ, ಅಂದಿನ ಗೃಹಮಂತ್ರಿಗಳಾಗಿದ್ದ ಸರ್ದಾರ್ ಪಟೇಲ್ ಹಾಗೂ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರ ಮುತ್ಸದ್ಧಿತನದಿಂದ ಭವ್ಯ ಮಂದಿರ ನಿರ್ವಣವಾದ ಘಟನೆ ಹಾಗೂ ಅವರು ಅದಕ್ಕೆ ನೀಡಿದ ವಸುಧೆೈವ ಕುಟುಂಬಕಂ ದೃಷ್ಟಿ (ಸೋಮನಾಥ ಮಂದಿರದಲ್ಲಿ ಎಲ್ಲ ದೇಶಗಳ ಪವಿತ್ರ ಮೃತ್ತಿಕೆ ಹಾಗೂ ಎಲ್ಲ ದೇಶಗಳ ನದಿಗಳ ನೀರಿನಿಂದ ಸೋಮನಾಥನಿಗೆ ಅಭಿಷೇಕ ಮಾಡಲಾಯಿತೆಂದು ತಿಳಿದಿದ್ದೇನೆ) ಕಣ್ಣುಮುಂದೆ ಇದ್ದುದರಿಂದ ಅಂತಹುದೇ ಕನಸನ್ನು ನನಸು ಮಾಡಿಕೊಳ್ಳುವ ಕಾತರ ರಾಮನ ಆರಾಧಕರಲ್ಲಿ ಸಹಜವಾಗಿಯೇ ಇತ್ತು.

ಮುಂದೊಂದು ದಿನ ವಿವಾದಿತ ಕಟ್ಟಡ ಧ್ವಂಸವಾಯಿತು. (ಅದು ಆಕಸ್ಮಿಕವೇ? ಉದ್ದೇಶಪೂರ್ವಕವೇ ಎಂಬ ವಿಚಾರ ನನಗೆ ಸಂಬಂಧಿಸಿದ್ದಲ್ಲ) ನಂತರದಲ್ಲಿ ಅಲ್ಲಿ ಭವ್ಯ ಮಂದಿರ ನಿರ್ವಣದ ಕನಸು ಮತ್ತೆ ಚಿಗುರೊಡೆಯಿತು.

ಆದರೆ, ಅದು ಅಷ್ಟೊಂದು ಸುಲಭ ಸಾಧ್ಯವಾಗಿರಲಿಲ್ಲ. ಏಕೆಂದರೆ ನಾವಿಂದು ಪ್ರಜಾಪ್ರಭುತ್ವ ಹಾಗೂ ಸರ್ವಧರ್ಮ ಸಮಭಾವದ ಸಂಕಲ್ಪದ ಮೇಲೆ ಸಂವಿಧಾನವನ್ನು ರಚಿಸಿಕೊಂಡಿದ್ದೇವೆ. ಇಲ್ಲಿನ ನ್ಯಾಯ ವ್ಯವಸ್ಥೆ ಅತ್ಯಂತ ಆದರ್ಶ ಪ್ರಾಯವಾಗಿದೆ. ಹೀಗಾಗಿ ಹಲವಾರು ನ್ಯಾಯಾಲಯಗಳಲ್ಲಿ ಹೋರಾಟ, ಸೋಲು-ಗೆಲುವು, ವಾದ-ವಿವಾದ, ಸವಾಲು ಪಾಟೀಸವಾಲು, ವಿಚಾರ ವಿನಿಮಯ ಸಂಧಾನ ಪ್ರಯತ್ನ ಎಲ್ಲವೂ ಮುಗಿದು ನ್ಯಾಯವಾದಿ ಪರಾಶರನ್ ರವರ ಅಗಾಧ ಪಾಂಡಿತ್ಯ, ಕಾನೂನಿನ ಜ್ಞಾನ ಹಾಗೂ ನ್ಯಾಯಾಲಯ ಒಪ್ಪಬಹುದಾದ ಸಾಕ್ಷ್ಯಳು ಸಾಂರ್ದಭಿಕ ಸಂಗತಿಗಳು, ಭಾವನೆಗಳು ಎಲ್ಲವೂ ಒಟ್ಟಿಗೆ ಸೇರಿ ಅಂತಿಮವಾಗಿ ರಾಮಜನ್ಮಭೂಮಿ ರಾಮಲಲ್ಲಾನಿಗೇ ಸೇರಿದ್ದು ಎಂಬ ತೀರ್ಪು ಬಂದಾಗ ದೇಶದ ಜನತೆ ಅದನ್ನು ಸ್ವೀಕರಿಸಿದ ರೀತಿ ತೋರಿದ ತಾಳ್ಮೆ, ಅವರನ್ನು ತಪ್ಪಾಗಿಯೇ ಭಾವಿಸಿಕೊಂಡು ಬಂದಿದ್ದ್ದ ಹಲವು ರಾಜಕಾರಣಿಗಳಿಗೆ, ಬುದ್ಧಿ ಜೀವಿಗಳಿಗೆ ಹಾಗೂ ವಿದೇಶಿ ವಿಚ್ಛಿದ್ರಕಾರಿ ಶಕ್ತಿಗಳಿಗೆ ಸ್ಪಷ್ಟ ಸಂದೇಶ ನೀಡಿತು. ಅದರಲ್ಲೂ ವೈಯಕ್ತಿಕ ಲಾಭಗಳಿಸಲು ಹೋದವರಿಗೆ ಭ್ರಮನಿರಸನವಾಯಿತು. ಎಂದೋ ಪರಿಹಾರವಾಗಬೇಕಿದ್ದ ಸಮಸ್ಯೆ ಅಂತೂ ಸುಖಾಂತ್ಯವಾಯಿತು. ಮರ್ಯಾದಾ ಪುರುಷೋತ್ತಮ ನಮ್ಮ ರಾಮಲಲ್ಲಾನಿಗೊಂದು ಮಂದಿರ ನಿರ್ಮಾಣ ಮಾಡುವ ಸಂಕಲ್ಪದ ಭೂಮಿಪೂಜೆಯ ಶುಭಘಳಿಗೆ 2020ರ ಆಗಸ್ಟ್ 5ರಂದು ಕೂಡಿಬಂದಿದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಅಂದು ಸಂಭ್ರಮ ಮನೆಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಏಕೆಂದರೆ ರಾಮನ ಆದರ್ಶ ಜಗತ್ತಿನಲ್ಲೆಲ್ಲಾ ಪಸರಿಸಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ರಾಮಾಯಣವಿದೆ, ರಾಮನಿದ್ದಾನೆ. ಥೈಲ್ಯಾಂಡ್ ದೇಶದಲ್ಲಂತೂ ಅಲ್ಲಿನ ರಾಜನನ್ನೂ ‘ರಾಮನೆಂದೇ’ ಸಂಬೋಧಿಸುತ್ತಾರೆ. ಇಂಡೋನೇಷಿಯಾದಲ್ಲಿ ರಾಮಾಯಣದ ಬ್ಯಾಲೆ ನಡೆಯುತ್ತದೆ. ಹೀಗಿರುವಾಗ ಒಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗುತ್ತಿರುವ ನಾವೆಲ್ಲರೂ ಧನ್ಯರಲ್ಲವೇ !

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net