

ಬೆಂಗಳೂರು: ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾಗೆ ಎಎಸ್ಐ ಬಲಿಯಾಗಿದ್ದು, ಇದು ರಾಜ್ಯದಲ್ಲಿ ಕೋವಿಡ್19ಗೆ ಪೊಲೀಸ್ ಸಾವಿನ ಮೊದಲ ಪ್ರಕರಣ.
ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಮೃತರು. ಇವರು 15 ದಿನಗಳಲ್ಲಿ ನಿವೃತ್ತಿಯಾಗಲಿದ್ದರು. ಥಣಿಸಂದ್ರದ ಮನೆಯಲ್ಲಿ ಕುಸಿದು ಬಿದ್ದ ಎಎಸ್ಐ ಸೋಮವಾರ ಮೃತಪಟ್ಟಿದ್ದರು. ಮರಣೋತ್ತರ ತಪಾಸಣೆ ಸಂದರ್ಭದಲ್ಲಿ ಇವರಿಗೆ ಕರೊನಾ ಪಾಸಿಟಿವ್ ಇದ್ದದ್ದು ಪತ್ತೆಯಾಗಿದೆ.
ವಿವಿ ಪುರಂ ಠಾಣೆಯ ಮತ್ತೊಬ್ಬ ಎಎಸ್ಐಗೂ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಠಾಣೆಯನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಇಂದಿಗೆ 36ಕ್ಕೆ ಏರಿದೆ.