

ಕೋಲಾರ: ಸ್ವಚ್ಛ ಭಾರತ್ ಮಿಷನ್&1.0 ಯೋಜನೆಯಡಿ ಸ್ವಚ್ಛತಾ ಸಲಕರಣೆ ಖರೀದಿಯಲ್ಲಿನ ಅಕ್ರಮ ಪ್ರಕರಣದ ಸಂಬಂಧ ನಗರಸಭೆಯ ಇಂಜಿನಿಯರ್ ತಲೆದಂಡವಾಗಿದೆ.
ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ (ಪರಿಸರ) ಎನ್.ಆರ್.ದಿಲೀಪ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದು, ಅವರನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸರ್ಕಾರಕ್ಕೆ ಶಿಾರಸು ಮಾಡಿದ್ದರು. ವರದಿ ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಅಮಾನತುಗೊಳಿಸಿ ಸೋಮವಾರ ಆದೇಶಿಸಿದ್ದಾರೆ.
ಎನ್.ಆರ್.ದಿಲೀಪ್ ಕರ್ತವ್ಯಲೋಪವೆಸಗಿರುವುದು ಮೇಲ್ನೊಟಕ್ಕೆ ದೃಢಪಟ್ಟಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ-10(1)(ಡಿ) ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಡುವಂತಿಲ್ಲ. ಜೀವನಾಧಾರ ಭತ್ಯೆಗೆ ಅರ್ಹರಿದ್ದು, ಶಹಬಾದ್ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಸ್ಥಳಾಂತರಿಸಿ ಆದೇಶ ಮಾಡಲಾಗಿದೆ.
* ಏನಿದು ಪ್ರಕರಣ:
ಸ್ವಚ್ಛ ಭಾರತ್ ಮಿಷನ್&1.0 ಯೋಜನೆಯಡಿ 2024ರ ಜನವರಿ 1ರಂದು ಸ್ವಚ್ಛತಾ ಸಲಕರಣೆ ಖರೀದಿಯಲ್ಲಿ 2 ಚಾರ್ಜಿಂಗ್ ಪಾಯಿಂಟ್ ಖರೀದಿಗೆ 6.77 ಲಕ್ಷಕ್ಕೆ ಅನುಮೋದನೆ ನೀಡಲಾಗಿದ್ದು, ಎಸ್ಆರ್ ದರ ಲಭ್ಯವಿಲ್ಲದ ಕಾರಣ ಕೊಟೇಷನ್ ಕರೆದು ದರಗಳನ್ನು ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿತ್ತು, ಆದರೆ ಅನುಮೋದನೆ ಪಡೆಯದೆ ಪ್ಯಾಕೇಜ್ ಟೆಂಡರ್ನಲ್ಲಿ ನತ್ಯಾಜ್ಯ ವಸ್ತು ನಿರ್ವಹಣೆಗೆ ಬೇಕಾಗಿರುವ ಬ್ಯಾಕ್ ಹೆವಿ ಲೋಡರ್-1, ಕಾಂಪ್ಯಾಕ್ಟರ್-1, ಸಿಸಿ ಕ್ಯಾಮರಾ&2, ಟ್ರಾ$್ಯಕ್ಟರ್ ಇಂಜಿನ್&2 ಗಳನ್ನು ಒಂದೇ ಟೆಂಡರ್ನಲ್ಲಿ ಕರೆದಿರುವುದಾಗಿ ತೋರಿಸಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.
ಅಲ್ಲದೆ ಟೆಂಡರ್ನಲ್ಲಿ ಭಾಗವಹಿಸಿರುವ ಬಿಡ್ದಾರರ ದಾಖಲೆ ಲಭ್ಯವಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್ಡಬ್ಲುಎಂ ಸಮಿತಿಯಲ್ಲಿ ಅನುಮೋದನೆ ಪಡೆಯದೆ ನೇರವಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆೆ.
ಎಲೆಕ್ಟ್ರಿಕಲ್ ಆಟೋ ಟಿಪ್ಪರ್&6, ಪುಷ್ಕಾರ್ಟ್-&15, ವೀಲ್ ಬಾರ್ *12 ಖರೀದಿಗೂ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯದೆ ಇಂಜಿನಿಯರ್ ದಿಲೀಪ್ ಟೆಂಡರ್ ಕರೆದಿರುವುದು ಗೊತ್ತಾಗಿದೆ.
ತ್ಯಾಜ್ಯ ನಿರ್ವಹಣಾ ಟಕಕ್ಕೆ 80 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಸಂಸ್ಕರಣಾ ಯಂತ್ರ ಅಳವಡಿಸಿದ್ದು, ಎನ್ಜಿಡಿ 606/2018ರ ಆದೇಶಗಳನ್ವಯ ಪ್ರತಿ ವರ್ಷ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ಟ್ರಾನ್ಸ್ಪೋರ್ಟೇಷನ್, ಕನೆಕ್ಷನ್ ಮತ್ತು ಸಕ್ರಿಗೇಷನ್ನನ್ನು ಸರಿಯಾದ ರೀತಿ ಮಾಡುವಲ್ಲಿ ವಿಲರಾಗಿದ್ದಾರೆ. ನತ್ಯಾಜ್ಯ ವಸ್ತು ನಿರ್ವಹಣೆಯ ಟಕಕ್ಕೆ ಪರಿಸರ ಮಾಲಿನ್ಯ ಅಧಿಕಾರಿಗಳಿಂದ ಎಂಎಸ್ಡಬ್ಲು ಅರ್ಹತೆಯ ಅನುಮತಿ ಪಡೆಯದ ಕಾರಣ ಕಟ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಹಲವು ಬಾರಿ ಸಾಮಾನ್ಯ ಸಭೆಗಳಲ್ಲಿ ಮೌಖಿಕವಾಗಿ ಸೂಚಿಸಿದ್ದರೂ ಯಾವುದೇ ಕ್ರಮವಹಿಸುವಲ್ಲಿ ವಿಲರಾಗಿದ್ದಾರೆ. ನ ತ್ಯಾಜ್ಯ ನಿರ್ವಹಣಾ ಟಕಕ್ಕೆ ಸುಮಾರು < 1 ಕೋಟಿ ವೆಚ್ಚದಲ್ಲಿ 8 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಸಂಸ್ಕರಣಾ ಯಂತ್ರ ಅಳವಡಿಸಿದ್ದು, ನಗರದಲ್ಲಿನ ತ್ಯಾಜ್ಯವನ್ನು ಟಕಕ್ಕೆ ತಲುಪಿಸಿ ನಿರ್ವಹಣೆ ಮಾಡುವಲ್ಲಿ ಕೂಡ ಇಂಜಿನಿಯರ್ ಮತ್ತು ತಂಡದವರು ವಿಲರಾಗಿದ್ದಾರೆ.
* ಯಾವುದಕ್ಕೆ ಎಷ್ಟೆಷ್ಟು ಬಿಲ್?
6 ಬುಲೆಟ್ ಸಿಸಿ ಕ್ಯಾಮರಾಗೆ ಮಾರುಕಟ್ಟೆ ಬೆಲೆ 10 ಸಾವಿರ ರೂ. ಇದ್ದರೆ ಬಿಲ್ ಪಾವತಿ ಮಾಡಿರುವುದು 6.5 ಲಕ್ಷ ರೂ., 34 ಸಾವಿರ ರೂ. ಬೆಲೆಯ 2 ಚಾರ್ಜಿಂಗ್ ಪಾಯಿಂಟ್ಗೆ 8 ಲಕ್ಷ ರೂ., 1.20 ಲಕ್ಷ ಬೆಲೆಯ 15 ಪುಶ್ ಕಾರ್ಟ್ಗೆ 5.5 ಲಕ್ಷ ರೂ., 60 ಲಕ್ಷ ಬೆಲೆಯ 6 ಎಲೆಕ್ಟ್ರಿಕ್ ಮಿನಿ ಟಿಪ್ಪರ್ಗೆ 98 ಲಕ್ಷ ರೂ. ನೀಡಲಾಗಿದೆ. <25 ಲಕ್ಷದ ರೆಪ್ಯೂಸ್ ಕಾಂಪ್ಯಾಕ್ಟರ್ಗೆ 51 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದ್ದು, ಇದರ ಇನ್ವಾಯ್ಸ್ ಬಿಲ್ "ವಿಜಯವಾಣಿ'ಗೆ ಲಭ್ಯವಾಗಿದೆ. 16,500 ರೂ. ಬೆಲೆಯಿರುವ ಒಂದು ಇವಿ ಚಾರ್ಜರ್ಗೆ ಹೆಚ್ಚುವರಿಯಾಗಿ 3.38 ಲಕ್ಷ ರೂ. ಹೀಗೆ ಎರಡು ಚಾರ್ಜರ್ಗಳಿಗೆ ಒಟ್ಟು 7.99 ಲಕ್ಷ ರೂ. ಪಾವತಿ ಮಾಡಲಾಗಿದ್ದು, ಸರ್ಕಾರದ ಅನುದಾನ ದುರುಪಯೋಗಪಡಿಸಲಾಗಿದೆ.
* ಬೆಳಕು ಚೆಲ್ಲಿದ್ದ ವಿಜಯವಾಣಿ
ಸ್ವಚ್ಛ ಭಾರತ್ ಮಿಷನ್&1.0 ಯೋಜನೆಯಡಿ ನಗರಸಭೆಯಿಂದ "ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ?', ಶೀರ್ಷಿಕೆಯಡಿ ಅಕ್ಟೋಬರ್ 16 ಮತ್ತು 24ರಂದು "ವಿಜಯವಾಣಿ'ಯಲ್ಲಿ ಸರಣಿ ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು. ಈ ಬಗ್ಗೆ ಸಾಮಾನ್ಯ ಸಭೆಯಲ್ಲೂ ವ್ಯಾಪಕ ಚರ್ಚೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದ್ದರು.