ಕಂಠಪೂರ್ತಿ ಕುಡಿದು ಬಾರ್​ ಮಾಲೀಕನಿಗೆ ಹಿಗ್ಗಾಮುಗ್ಗಾ ಹೊಡೆದ ಕುಡುಕರು...

Accused 9 May 20
Published on

ರಾಯಚೂರು: ಮದ್ಯದಂಗಡಿ ಬಾಗಿಲು ಓಪನ್​ ಆಗುತ್ತಿದ್ದಂತೆ ಕುಡುಕರ ಹಾವಳಿಯೂ ಹೆಚ್ಚಾಗುತ್ತಿದೆ. ಕಂಠಪೂರ್ತಿ ಕುಡಿದು ದೊಡ್ಡದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತಿದ್ದಾರೆ.

ಇದೀಗ ರಾಯಚೂರಿನ ದೇವದುರ್ಗದಲ್ಲಿ ಮೂವರು ಕುಡುಕರು ಫುಲ್​ ಟೈಟ್​ ಆಗಿ ಬಾರ್ ಮಾಲೀಕನಿಗೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ದೇವದುರ್ಗದ ಕ್ಷೀರಸಾಗರ ಬಾರ್​ ಮಾಲೀಕ ರವೀಂದ್ರ ಅಕ್ಕರಿಕೆ ಮೇಲೆ ಹಲ್ಲೆಯಾಗಿದೆ. ಆಗಲೇ ಒಂದು ಅಂಗಡಿಯಲ್ಲಿ ಮದ್ಯ ಖರೀದಿಸಿ ಕಂಠಪೂರ್ತಿ ಕುಡಿದು ಮತ್ತೇರಿಸಿಕೊಂಡಿದ್ದ ಮೂವರು ಕುಡುಕರು, ಬಾರ್​​ವೊಂದರ ಮಾಲೀಕನ​ ಬಳಿ ತೆರಳಿ ಗಲಾಟೆ ಮಾಡಿದ್ದಾರೆ. ಸಂಜೆ ಹೊತ್ತು ಹೋಗಿ ಮದ್ಯ ಕೊಡಿ ಎಂದಿದ್ದಾರೆ. ಆದರೆ ಸರ್ಕಾರ ಇನ್ನೂ ಬಾರ್​​ಗಳಿಗೆ ತೆರೆಯಲು ಅನುಮತಿ ನೀಡಿಲ್ಲದ ಕಾರಣ, ಮಾಲೀಕ ರವೀಂದ್ರ ಅಕ್ಕರಿಕೆ, ಮದ್ಯದಂಗಡಿ ಬಾಗಿಲು ಓಪನ್ ಮಾಡೋದಿಲ್ಲ ಎಂದಿದ್ದಾರೆ.

ಅಷ್ಟಕ್ಕೇ ಸಿಟ್ಟಾದ ಕುಡುಕರು ಹಿಗ್ಗಾಮುಗ್ಗಾ ಹೊಡೆದು, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ತೀವ್ರ ರಕ್ತಸ್ರಾವ ಆದ ಪರಿಣಾಮ ರವೀಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಕುಡುಕರು ಅಂಜಳ ಗ್ರಾಮದವರು ಎನ್ನಲಾಗಿದ್ದು, ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net