

ಕೋಲಾರ: ಸಹಜ ಹೆರಿಗೆಯಾದ ಮಹಿಳೆಗೆ ಹೆರಿಗೆಯ ನಂತರದ ಚಿಕಿತ್ಸೆ ವೇಳೆ ಮಹಿಳೆಯ ದೇಹದಲ್ಲೇ ಬಟ್ಟೆಯನ್ನು ಉಳಿಸಿ ಮನೆಗೆ ಕಳಿಸುವ ಮೂಲಕ ಬಾಣಂತಿಯ ಜೀವದ ಜತೆ ಸರ್ಕಾರಿ ಆಸ್ಪತ್ರೆಯ ವೈದ್ಯೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮಾಲೂರು ತಾಲೂಕಿನ ರಾಮಸಾಗರದ ಚಂದ್ರಿಕಾ ಎಂಬವರು ಮೇ 5ರಂದು ನಗರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಚಂದ್ರಿಕಾ ಸಹಜ ಹೆರಿಗೆ ಮೂಲಕವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಸಂದರ್ಭದಲ್ಲಿ ರಕ್ತಸ್ರಾವ ತಡೆಗೆ ವೈದ್ಯೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಹೋದ ನಂತರ 3&4 ದಿನಗಳ ನಂತರ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ನಗರದ ಖಾಸಗಿ ನರ್ಸಿಂಗ್ ಹೋಂ ವೈದ್ಯರ ಬಳಿ ತೋರಿಸಿದ್ದಾರೆ. ಆಗ ಗಾಯಕ್ಕೆ ಕ್ರೀಮ್ ಹಚ್ಚುವ ಸಮಯದಲ್ಲಿ ಬಟ್ಟೆ ಕಂಡುಬಂದಿದೆ ಎಂದು ಚಂದ್ರಿಕಾ ಕುಟುಂಬಸ್ಥರು ದೂರಿದ್ದಾರೆ.
"ಹೆರಿಗೆ ಮಾಡಿಸುವ ವೇಳೆ ವೈದ್ಯರು ರ್ನಿಲಕ್ಷ$್ಯ ತೋರಿದ್ದಾರೆ. ಗರ್ಭಿಣಿ ವಿಚಾರದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯ ವೈದ್ಯರ ರ್ನಿಲಕ್ಷ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್ಕುಮಾರ್ ಗಮನಕ್ಕೆ ತಂದಾಗ ರ್ನಿಲಕ್ಷ$್ಯ ತೋರಿದ ವೈದ್ಯೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಮುಂದೆ ಈ ರೀತಿ ಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂಬ ಉದಾಸೀನದ ಉತ್ತರ ನೀಡಿದ್ದಾರೆ' ಎಂದು ಚಂದ್ರಿಕಾ ಪತಿ ರಾಜೇಶ್ ಆರೋಪಿಸಿದ್ದಾರೆ.