ಉತ್ತಮರಿದ್ದಾರೆ ಜಿಲ್ಲಾ ಮಂತ್ರಿ

11klr3- k.y.najegowda
Published on

ಕೋಲಾರ: ಜಿಲ್ಲೆಯ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಒಳ್ಳೆಯವರಿದ್ದು, ಕ್ಷೇತ್ರಗಳಿಗೆ ಬೇಕಾಗಿರುವ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ನಗರದ ಎಸ್ಪಿ ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು ಯಾವ ಆಲೋಚನೆ ಮೇರೆಗೆ ಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ. ನಮಗಂತೂ ಬೈರತಿ ಸುರೇಶ್​ ಒಳ್ಳೆಯ ಉಸ್ತುವಾರಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಳಿಗೆ ಕೇಳಿದಷ್ಟು ಅನುದಾನ ಸಿಎಂ, ಡಿಸಿಎಂ, ಸಚಿವರಿಂದ ದೊರೆಯುತ್ತಿದೆ. ಇದುವರೆಗೂ ಅಂದಾಜು ಮಾಲೂರು ತಾಲೂಕಿಗೆ 2,500 ಕೋಟಿಗೂ ಅಧಿಕ ಹೆಚ್ಚು ಅನುದಾನ ಬಂದಿದೆ, ಬಸ್​ ನಿಲ್ದಾಣ, ಮಾಸ್ತಿ ವಸತಿ ಶಾಲೆ, ಆಸ್ಪತ್ರೆ, ಬಸ್​ ನಿಲ್ದಾಣ, ಮೇಲ್ಸೇತುವೆ, ಹೈಟೆಕ್​ ಕಾಲೇಜು ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಇದೆಲ್ಲ ಟೀಕೆ ಮಾಡುವವರಿಗೆ ಉತ್ತರ ಎಂದು ಹೇಳಿದರು.

ಕ್ಷೇತ್ರದಲ್ಲಿ 15 ಸಾವಿರ ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮಾಲೂರು ನಗರದಲ್ಲಿ ನಿವೇಶನ ರಹಿತರನ್ನು 1 ಸಾವಿರ ಮಂದಿಯನ್ನು ಗುರುತಿಸಲಾಗಿದ್ದು, 30 ಎಕರೆ ಜಾಗ ಗುರುತಿಸಲಾಗಿದೆ ಎಂದರು.

ತಾಲೂಕು ವ್ಯಾಪ್ತಿಯಲ್ಲಿನ 28 ಗ್ರಾ.ಪಂನಿಂದ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದ್ದು, 16,000 ಅರ್ಜಿ ಸಲ್ಲಿಕೆಯಾಗಿದೆ. ಪರಿಶೀಲನೆ ನಡೆಯುತ್ತಿದ್ದು, ಅರ್ಹ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ಕೆಜಿಎ್​ ಆರ್​ಟಿಒ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಏಕೆ ಪಾಲ್ಗೊಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒಕ್ಕೂಟದಲ್ಲಿ ಮೊದಲೇ ಬೋರ್ಡ್​ ಸಭೆ ನಿಗದಿಯಾಗಿತ್ತು, ಆದ್ದರಿಂದ ಸಾರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net