ಪ್ರತಿ ಗ್ರಾಮದಲ್ಲೂ ಗೋಮಾಳ ಕಣ್ಮರೆ

Govardhan Trust
ಗೊಂದಿಚಟ್ನಹಳ್ಳಿಯಲ್ಲಿ ಗೋವರ್ಧನ ಟ್ರಸ್ಟ್‌ನಿಂದ 6 ಎಕರೆ ಜಾಗದಲ್ಲಿ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯಕ್ಕೆ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಸಿ.ವಿ.ರುದ್ರಾರಾಧ್ಯ, ಕೆ.ಸಿ.ನಟರಾಜ್ ಭಾಗವತ್, ಎಸ್.ಕೆ.ಶೇಷಾಚಲ ಇತರರಿದ್ದರು.
Published on

ಶಿವಮೊಗ್ಗ: ಹಿಂದೆಲ್ಲ ಗೋವುಗಳಿಗಾಗಿಯೇ ಪ್ರತಿ ಗ್ರಾಮದಲ್ಲೂ ಗೋಮಾಳಗಳು ಮೀಸಲಿರುತ್ತಿದ್ದವು. ಆದರೆ ಇಂದು ಆ ಎಲ್ಲ ಗೋಮಾಳಗಳು ಕಣ್ಮರೆಯಾಗುತ್ತಿವೆ ಎಂದು ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಬೇಸರ ವ್ಯಕ್ತಪಡಿಸಿದರು.

ಗೊಂದಿಚಟ್ನಹಳ್ಳಿಯಲ್ಲಿ ಸೋಮವಾರ ಗೋವರ್ಧನ ಟ್ರಸ್ಟ್‌ನಿಂದ 6 ಎಕರೆ ಜಾಗದಲ್ಲಿ ಗೋಮಾತೆಗೆ ಮೇವು ಬೆಳೆಯುವ ಕಾರ್ಯಕ್ರಮದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗೋಮಾಳಗಳಲ್ಲಿ ಜಾನುವಾರುಗಳನ್ನು ಬಿಟ್ಟು ಮೇಯಿಸುವ ಪ್ರವೃತ್ತಿ ಇತ್ತು. ಗೋಪಾಲಕರು ಸಂಜೆವರೆಗೂ ಗೋವುಗಳನ್ನು ಮೇಯಿಸಿ ಆನಂತರ ಮನೆಗಳತ್ತ ಕರೆದೊಯ್ಯುತ್ತಿದ್ದರು. ಆದರೆ ಇಂದು ಅಂತಹ ಗೋಮಾಳಗಳು ಎಲ್ಲಿದ್ದಾವೆ ಎಂಬುದನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಎಲ್ಲ ಗೋಮಾಳಗಳು ಒತ್ತುವರಿಯಾಗಿವೆ ಎಂದು ತಿಳಿಸಿದರು.

ಗೋಮಾಳಗಳೆಲ್ಲ ಮಾಯವಾಗಿ ಗೋವುಗಳನ್ನು ಮನೆಗಳಲ್ಲಿ ಕಟ್ಟಿಹಾಕಿ ಮೇವು ಹಾಕುವ ಪರಿಸ್ಥಿತಿ ಬಂದಿದೆ. ಆದರೆ ಎಲ್ಲ ಗೋವುಗಳನ್ನು ಕಟ್ಟಿ ಹಾಕಿ, ಅವುಗಳಿಗೆ ಬೇಕಾದ ಮೇವು ಒದಗಿಸುವುದು ಸುಲಭದ ಕೆಲಸವಲ್ಲ. ಮೇವು ಸಂಗ್ರಹಿಸುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟದ ವಿಚಾರ. ಮಲೆನಾಡಿನಲ್ಲೂ ಮೇವು ಸಿಗುತ್ತಿಲ್ಲ. ನಮ್ಮ ಮಠದಲ್ಲೂ ಗೋವುಗಳಿಗೆ ಮೇವು ಕೊರತೆ ಆಗುತ್ತಿತ್ತು. ಹೀಗಾಗಿ ಆ ಕೊರತೆ ನೀಗಿಸಲು 20 ಎಕರೆಯಲ್ಲಿ ಮೇವು ಬೆಳೆಸುತ್ತಿದ್ದೇವೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡಿದರು. ಟ್ರಸ್ಟ್‌ನ ಮಹಾಪೋಷಕ ಕೆ.ಎಸ್.ಈಶ್ವರಪ್ಪ, ಎಚ್.ಎಸ್.ಶಿವಶಂಕರ್, ಉಮಾಪತಿ, ಸಿ.ವಿ.ರುದ್ರಾರಾಧ್ಯ, ಎಚ್.ಎಸ್.ನಾಗರಾಜ್, ಕೆ.ಸಿ.ನಟರಾಜ್ ಭಾಗವತ್, ಬಿ.ಎ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಎಸ್.ಕೆ.ಶೇಷಾಚಲ, ಟ್ರಸ್ಟಿಗಳಾದ ಮಹಾಲಿಂಗ ಶಾಸ್ತ್ರಿ, ಸಂದೇಶ್ ಉಪಾಧ್ಯ, ವಿನೋದ್‌ಕುಮಾರ್ ಜೈನ್, ಶಿವಾನಂದಪ್ಪ, ನವ್ಯಶ್ರೀ ನಾಗೇಶ್, ಕುಬೇರಪ್ಪ, ಸತ್ಯಣ್ಣ, ರಮೇಶ್ ಬಾಬು, ಸಂಚಾಲಕರಾದ ಉಮಾ ಮೂರ್ತಿ, ಶುಭಾ ರಾಘವೇಂದ್ರ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net