ಹಲ್ಲುನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯ ಕಣ್ಣಿಗೆ ಬಲವಾಗಿ ಹೊಡೆದ ದಂತವೈದ್ಯ

Girl 30 may 20
Published on

ಮಡಿಕೇರಿ: ಹಲ್ಲಿನ ಚಿಕಿತ್ಸೆಗೆ ಹೋಗಿದ್ದ ಪುಟ್ಟ ಬಾಲಕಿಗೆ ದಂತ ವೈದ್ಯ ಬಲವಾಗಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ನಡೆದಿದ್ದು ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ. ಇಲ್ಲಿನ ಸೀಗೆತೋಡು ನಿವಾಸಿ ಸುಧಾಕರ್​ ಅವರ ಪುತ್ರಿ ತೀರ್ಥ (10) ಹಲ್ಲೆಗೊಳಗಾದ ಬಾಲಕಿ. ಈಕೆಗೆ ಹಲ್ಲು ನೋವೆಂದು ವೈದ್ಯರ ಬಳಿ ಹೋದಾಗ, ಆ ವೈದ್ಯ ಕಣ್ಣಿಗೆ ಹೊಡೆದಿದ್ದಾರೆ ಎಂದು ಪಾಲಕರು ಆರೋಪಿಸಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕಿಯ ಕಣ್ಣು ಕೆಂಪಾಗುವಷ್ಟು ಏಟು ಬಿದ್ದಿದೆ. ವೈದ್ಯರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net