

Rekha Gupta: ಆಗಸ್ಟ್ 20 ರ ಬುಧವಾರದಂದು ತಮ್ಮ ನಿವಾಸದಲ್ಲಿ ದಾಳಿಗೊಳಗಾದ ನಂತರ ದೆಹಲಿ ಮುಖ್ಯಮಂತ್ರಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ದೆಹಲಿ ಬಿಜೆಪಿ ಸಂಸದರೊಂದಿಗೆ ಕುಳಿತಿರುವ ಫೋಟೋ ಇದೀಗ ವೈರಲ್ ಆಗಿದೆ.
ಈ ಫೋಟೋದಲ್ಲಿ, ಚಾಂದನಿ ಚೌಕ್ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಇನ್ನು ಇತರ ಸಂಸದರು ಗುಪ್ತಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಾರೆ.
ಆಗಸ್ಟ್ 20 ರಂದು ಗುಜುರಾತ್ನ 41 ವರ್ಷದ ಆಟೋರಿಕ್ಷ ಚಾಲಕ ರಾಜೇಶ್ ಭಾಯ್ ಕಿಮ್ಜಿ ಭಾಯ್ ಸಕರಿಯಾ ಎಂಬುವವರು ಸಿವಿಲ್ ಲೈನ್ಸ್ನಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದ 'ಜನ್ ಸುನ್ವೈ' ಸಾರ್ವಜನಿಕ ಸಭೆಗೆ ಹೋಗಿದ್ದರು. ಈ ವೇಳೆ ದಾಳಿಕೋರ ಗುಪ್ತಾ ಮೇಲೆ ಕೂಗಾಡಿ, ಕಪಾಳ ಮೋಕ್ಷ ಮಾಡಿ ನಿಂದಿಸಿದ್ದಾನೆ.
ಹಿಂದಿನ ದಿನದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ಆರೋಪಿ ಸಕರಿಯಾ ಮುಖ್ಯಮಂತ್ರಿಯವರ ಶಾಲಿಮಾರ್ ಬಾಗ್ ನಿವಾಸದಲ್ಲಿ ಕೂತು ಆವರಣವನ್ನುಸಮೀಕ್ಷೆ ಮಾಡುತ್ತಿರುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ. (ಏಜೆನ್ಸೀಸ್)