

ವುಹಾನ್: ಚೀನಾದಲ್ಲಿ ಕೊರೊನಾ ವೈರಸ್ನಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು ಮುಂಜಾನೆಯ ವರದಿಯ ಪ್ರಕಾರ ಈವರೆಗೆ ಫಿಲಿಪೈನ್ಸ್ನಲ್ಲಿ ಒಂದು ಸಾವು ಸೇರಿದಂತೆ ಮೃತಪಟ್ಟವರ ಸಂಖ್ಯೆ 361ಕ್ಕೆ ಏರಿದ್ದು, 17,205 ಜನರನ್ನು ಸೋಂಕಿತರು ಎಂದು ಗುರುತಿಸಲಾಗಿದೆ.
ಕಳೆದ 24 ಗಂಟೆಗಳೊಳಗೆ ಕೊರೊನಾ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ 57 ಹೆಚ್ಚಳ ಕಂಡುಬಂದಿದೆ. ನಿನ್ನೆ (ಫೆ.2)ರಂದು ಚೀನಾದಿಂದ ಹೊರಗೆ ಫಿಲಿಪೈನ್ಸ್ನಲ್ಲಿ ಕೊರೊನಾ ವೈರಸ್ನಿಂದಾಗಿ ಮೊದಲ ಸಾವು ಸಂಭವಿಸಿರುವುದು ದಾಖಲಾಗಿದೆ.
ಚೀನಾ ಹೊರತು ಪಡಿಸಿ ಒಟ್ಟು 23 ದೇಶಗಳಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಭಾರತದ ಕೇರಳದಲ್ಲಿ ನಿನ್ನೆ ಎರಡನೇ ಕೊರನೊ ವೈರಸ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್)