

ರಾಯಚೂರು: ಇಂದು ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇನ್ನೋರ್ವ ಯುವಕ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದಾನೆ.
ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದ ಹಳ್ಳಕ್ಕೆ ಬಟ್ಟೆ ತೊಳೆಯಲೆಂದು ತೆರಳಿದ್ದ ಪಾರ್ವತಿ (30), ಅರ್ಜುನ (9), ಶಿಲ್ಪಾ (10) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಶವಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಹಟ್ಟಿ ಚಿನ್ನದ ಗಣಿ ಠಾಣೆ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೈಕ್ಗಳ ನಡುವೆ ಭೀಕರ ಅಪಘಾತ.. ಹೊತ್ತಿ ಉರಿದ ವಾಹನಗಳು; ಓರ್ವ ಸಾವು
ಹಾಗೇ ಇನ್ನೊಂದು ಘಟನೆಯಲ್ಲಿ ಯವಕನೋರ್ವ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದಾನೆ. ಮಾನ್ವಿ ತಾಲೂಕಿನ ಹರನಾಹಳ್ಳಿ ಬಳಿಯ ಶಾಸ್ತ್ರಿ ಕ್ಯಾಂಪ್ ನಿವಾಸಿ ಸಂದೀಪ್ ಕುಮಾರ್ (24) ನದಿ ಬಳಿ ಕಣ್ಮರೆಯಾದ ಯುವಕನಾಗಿದ್ದು, ಆತನ ಚಪ್ಪಲಿ, ಬಟ್ಟೆ ದಡದ ಮೇಲೆಯೇ ಇದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಶೋಧಕಾರ್ಯ ನಡೆಸುತ್ತಿದ್ದಾರೆ.