ನೀರಲ್ಲಿ ಕಾಯುತ್ತಿದ್ದ ಜವರಾಯ ಅಪ್ಪ-ಮಗನನ್ನೂ ಬಿಡಲಿಲ್ಲ...

Death March 4
Published on

ಬಳ್ಳಾರಿ: ಬಾಯಾರಿಕೆಯ ದಾಹ ನೀಗಿಸಿಕೊಳ್ಳಲೆಂದು ಕೆರೆ ಬಳಿಗೆ ಹೋದ ಅಪ್ಪ-ಮಗ ಇಬ್ಬರೂ ನೀರುಪಾಲಾಗಿದ್ದಾರೆ.

ಚಳಗುರ್ಕಿ ಗ್ರಾಮದ ಸಿದ್ದಲಿಂಗಪ್ಪ (50) ಮತ್ತು ಇವರ ಪುತ್ರ ದರ್ಶನ (14) ಸಾವಿಗೀಡಾದ ದುರ್ಧೈವಿಗಳು.

ಸಿದ್ದಲಿಂಗಪ್ಪ ಮತ್ತು ದರ್ಶನ ಇಬ್ಬರೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ಕೆರೆಯಲ್ಲಿ ನೀರು ಕುಡಿಯಲೆಂದು ದರ್ಶನ ಹೋಗಿದ್ದ. ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ಕಾಪಾಡಲು ಹೋದ ತಂದೆ ಸಿದ್ದಲಿಂಗಪ್ಪ ಕೂಡ ಮಗನೊಂದಿಗೆ ನೀರುಪಾಲಾಗಿದ್ದಾರೆ.

ತಂದೆ-ಮಗನ ಧಾರುಣ ಸಾವಿಗೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net