ಜೀವ ಉಳಿಸುವ ದೇವರು; ವೈದ್ಯರಿಗೆ ಧನ್ಯವಾದ ಹೇಳುವ ದಿನ

dfxdf
Published on

ಕೋವಿಡ್ ಅಬ್ಬರದಿಂದ ಜಗತ್ತು ತಲ್ಲಣಗೊಂಡಿದ್ದರೂ ದೈವಸ್ವರೂಪಿಗಳಂತೆ ಪ್ರಾಣವನ್ನೇ ಒತ್ತೆ ಇಟ್ಟು ಸೇವೆ ನೀಡುತ್ತಿದ್ದಾರೆ ವೈದ್ಯರು. ಆ ಮೂಲಕ ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತಿಗೆ ಅರ್ಥ ತುಂಬಿದ್ದಾರೆ. ವೈದ್ಯರ ನಿಸ್ವಾರ್ಥ ಸೇವೆಯಿಂದ ಜು. 1ರ ವೈದ್ಯರ ದಿನ ಸಾರ್ಥಕತೆ ಪಡೆದುಕೊಂಡಿದೆ.

ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸಲು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಒಂದೊಂದು ದೇಶದಲ್ಲಿ ಒಂದೊಂದು ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಜು.1ರಂದು ಆಚರಿಸಲಾಗುತ್ತದೆ. ಆರೋಗ್ಯ ಕ್ಷೇತ್ರದ ಫಲಾನುಭವಿಗಳು ಹಾಗೂ ರೋಗಿಗಳು ಆಚರಿಸಬೇಕೆಂದು ಭಾವಿಸಲಾಗಿದ್ದರೂ ಸಾಮಾನ್ಯವಾಗಿ ಆರೋಗ್ಯ ಸಂಸ್ಥೆಗಳು ಆಚರಿಸುತ್ತವೆ. ವೈದ್ಯರ ಕೊಡುಗೆಗಳನ್ನು ಹಾಗೂ ಅವರ ಸೇವೆಯನ್ನು ಸ್ಮರಿಸುವ ದಿನವಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ರಾಯ್ ಕೇವಲ ವೈದ್ಯರಾಗಿರಲಿಲ್ಲ, ಸ್ವಾತಂತ್ರ್ಯ ಹೋರಾಟ ಗಾರರೂ ಆಗಿದ್ದರು. 1905ರಲ್ಲಿ ಕೋಲ್ಕತ್ತ ವಿವಿಯಲ್ಲಿ ವ್ಯಾಸಂಗ ಮಾಡುವಾಗ ಬಂಗಾಳ ವಿಭಜನೆಯಾ ಯಿತು. ಆಗ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ರಾಯ್ ಕೆಲಕಾಲ ಮಹಾತ್ಮ ಗಾಂಧಿ ಅವರ ವೈದ್ಯರಾಗಿ ಸೇವೆ ನೀಡಿದ್ದಾರೆ. ಆಡಳಿತದಲ್ಲೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದು ಮತ್ತೊಂದು ವಿಶೇಷ. ಅವರ ಆಡಳಿತಾವಧಿ ಯಲ್ಲಿ ಬೃಹತ್ ಆಸ್ಪತ್ರೆಗಳು ಸ್ಥಾಪನೆಯಾದವು. 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾಗಿದ್ದ ಅವರು, ಆ ಸಮಯದಲ್ಲೂ ರೋಗಿಗಳಿಗೆ ಸೇವೆ ನೀಡುತ್ತಿದ್ದರು. ಆ ಕಾರಣಕ್ಕೆ ಜನರ ಒಲವು ಗಳಿಸಿದ್ದರು.

ಡಾ. ಬಿಧಾನ್ ಚಂದ್ರ ರಾಯ್ ಸ್ಮರಣೆ

ಭಾರತದಲ್ಲಿ ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಸ್ಮರಣಾರ್ಥ ಜು.1ರಂದು ‘ರಾಷ್ಟ್ರೀಯ ವೈದ್ಯರ ದಿನ’ ಆಚರಿಸಲಾಗುತ್ತದೆ. 1882ರ ಜು.1ರಂದು ಜನಿಸಿದ ರಾಯ್, 1962ರಲ್ಲಿ ಅಂದೇ ನಿಧನರಾದರು. ಅಸಾಧಾರಣ ವೈದ್ಯರಾಗಿದ್ದ ಅವರ ಗಣನೀಯ ಸೇವೆ ಪರಿಗಣಿಸಲು 1961ರ ಫೆ. 4ರಂದು ಕೇಂದ್ರ ಸರ್ಕಾರ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಾತ್ರವಲ್ಲ, ಅವರ ಬದುಕು ಹಾಗೂ ಸೇವೆಯ ನೆನಪಿಗಾಗಿ 1991ರ ಜು.1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಘೋಷಿಸಿತು. ಅಪ್ರತಿಮ ವೈದ್ಯರಾಗಿದ್ದ ಡಾ. ರಾಯ್, ತಮ್ಮ ದೂರದೃಷ್ಟಿಯ ನಿಲುವುಗಳಿಂದ ವೈದ್ಯಲೋಕಕ್ಕೆ ಅವಿಸ್ಮರಣೀಯ ಕೊಡುಗೆ ಕೊಟ್ಟರು. ಮೇಲು- ಕೀಳು ಎನ್ನದೆ, ಜಾತಿಭೇದ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನರ ಮೆಚ್ಚುಗೆ ಗಳಿಸಿದ್ದರು.

ವೈದ್ಯರು ಸಾಮಾನ್ಯವಾಗಿ ಸುದೀರ್ಘ ಕೆಲಸ ಮತ್ತು ರೋಗಿಗಳ ಭಾವನೆಗಳಿಗೆ ಸ್ಪಂದಿಸುವುದರ ಜತೆಗೆ ಚಿಕಿತ್ಸೆ ನೀಡುವುದು. ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಸವಾಲಾಗಿರುತ್ತದೆ. ಕೆಲವೊಮ್ಮೆ ರೋಗಿಗಳೊಂದಿಗೆ ಭಾವನಾತ್ಮಕ ಬಂಧವನ್ನೂ ಹೊಂದಬೇಕಾಗುತ್ತದೆ. ಇದರ ನಡುವೆ ಕುಟುಂಬ,ಕೆಲಸ ಈ ಎಲ್ಲದರ ನಡುವೆ ಸಮತೋಲ ಕಾಯ್ದುಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ವೈದ್ಯರೂ ಸಹ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಡಾ. ಎ.ಎಂ. ಶಫೀಕ್ ಸಲಹೆ ನೀಡುತ್ತಾರೆ. ಸೈಕ್ಲಿಂಗ್, ಈಜು, ಟ್ರೆಕ್ಕಿಂಗ್ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯೋಗ ಮತ್ತು ಧ್ಯಾನ ದಂತಹ ಪರ್ಯಾಯ ಪರಿಹಾರವನ್ನು ತೆಗೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಸಹೋದ್ಯೋಗಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಇದಕ್ಕಾಗಿ ವೈದ್ಯರು ನಿಯಮಿತವಾಗಿ ಒತ್ತಡ ರಹಿತ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ವೈದ್ಯರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಬೇಕು. ಇಲ್ಲವಾದರ ಅದರ ಪರಿಣಾಮ ರೋಗಿಗಳ ಮೇಲೆ ಬೀರಲಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net