15ರ ಬೆಳಗ್ಗೆಯೇ ತೆರೆಯಲಿದೆ ಗ್ರಾಹಕರ ಮೇಳ

13
Published on

ಸ್ವಾತಂತ್ರ್ಯೋತ್ಸವದ ಅಂಗವಾಗಿ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಆಯೋಜಿಸಿರುವ ‘ಕರ್ನಾಟಕ ಸಂಭ್ರಮ 50’ ಗ್ರಾಹಕರ ಮೇಳವು ಆಗಸ್ಟ್ 15ರ ಬೆಳಗ್ಗೆ 11 ರಿಂದ ರಾತ್ರಿ 9.30 ರವರೆಗೆ ತೆರೆದಿರುತ್ತದೆ.
ಇದು ದೊಡ್ಡ ಮೇಳವಾಗಿದ್ದು, ಪ್ರತಿದಿನ ಸಂಜೆ 4 ರಿಂದ ರಾತ್ರಿ 9.30ರವರೆಗೆ ನಡೆಯುತ್ತಿತ್ತು. ಆಗಸ್ಟ್ 15 ರಂದು ಸಾರ್ವಜನಿಕರ ಅನುಕೂಲಕ್ಕಾಗಿ ಮೇಳವನ್ನು ಬೆಳಗ್ಗೆ 11 ರಿಂದ ರಾತ್ರಿ 9.30 ರವರೆಗೆ ವ್ಯವಸ್ಥೆ ಮಾಡಲಾಗಿದೆ.
ರೋಬಾಟಿಕ್ ಬಟರ್‌ಫ್ಲೈ, ರೋಬಾಟಿಕ್ ಅನಿಮಲ್ ಕಿಂಗ್‌ಡಮ್, ಹಿಮಾಲಯನ್ ಅನಿಮಲ್ಸ್ ಮತ್ತು ಅವತಾರ್ ಎಂಬ ನಾಲ್ಕು ಪರಿಕಲ್ಪನೆ ಆಧರಿಸಿರುವ ಮೇಳವು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಮೇಳದಲ್ಲಿ ಗೃಹೋಪಯೋಗಿ ವಸ್ತುಗಳು, ಡ್ರೆಸ್ ಮೆಟೀರಿಯಲ್‌ಗಳು, ರೆಡಿಮೇಡ್ ಬಟ್ಟೆ, ಸೀರೆ, ಕುರ್ತಾ, ಪೈಜಾಮ, ಶರ್ಟ್‌ಗಳು ಮತ್ತು ಸೂಟ್‌ಗಳು ಲಭ್ಯವಿವೆ. ಹಲವಾರು ರೀತಿಯ ಮಸಾಲಾ ಪುಡಿಗಳು, ಜೇನುತುಪ್ಪ, ಚಾಕಲೇಟ್‌ಗಳು, ಚಟ್ನಿ ಪುಡಿ, ಉಪ್ಪಿನಕಾಯಿ, ಒಣಹಣ್ಣುಗಳು ಸಹ ಮಾರಾಟಕ್ಕೆ ಇವೆ. ಆಗಸ್ಟ್ 25ರವರೆಗೂ ಮೇಳ ಇರಲಿದೆ ಎಂದು ಸೈಮನ್ ಎಕ್ಸಿಬಿಟರ್ಸ್‌ನ ನಿರ್ದೇಶಕ ಎಂ.ಎಸ್.ನಾಗಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net