

ಮುಂಬೈ: ವೋಕ್ಸ್‌ವ್ಯಾಗನ್ ಇಂಡಿಯಾ, ಸ್ಕೋಡಾ ಇಂಡಿಯಾ, ಟಿ-ಸೀರೀಸ್ ಮತ್ತು ಕೆವೆಂಟರ್ಸ್, ಜಿಯೋ, ಏರ್ಟೆಲ್, ಐಟೆಲ್, ಬಿಎಸ್ಎನ್ಎಲ್ ಸೇರಿ ದೇಶದ ಪ್ರಸಿದ್ಧ ಕಂಪನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿನ ಅಧಿಕೃತ ಖಾತೆಗಳಲ್ಲಿ ಕ್ಷಮೆಯಾಚಿಸುತ್ತಿರುವ ಫೋಸ್ಟ್ ಮಾಡಿವೆ. ಈ ಕ್ಷಮೆಯಾಚನೆಗಳು ನಿಜವಲ್ಲ. ಆದರೆ, #SorryNotSorry ಎಂಬ ವೈರಲ್ ಮಾರ್ಕೆಟಿಂಗ್ ಪ್ರವೃತ್ತಿಯ ಭಾಗವಾಗಿದೆ.
ಹೌದು, ಈ ವಿಭಿನ್ನ ಪೋಸ್ಟ್ ಮಾಡುವ ಮೂಲಕ ಕಂಪನಿಗಳು ತಮ್ಮ ಕೊಡುಗೆಗಳು, ರೀಚಾರ್ಜ್ ಯೋಜನೆಗಳು ಮತ್ತು ಇತರ ಹೊಸ ಉತ್ಪನ್ನಗಳನ್ನು ಪ್ರಚಾರ ಮಾಡಲು ಹಾಸ್ಯಮಯ ಶೈಲಿಯಲ್ಲಿ ಪೋಸ್ಟ್‌ಗಳ ಮೂಲಕ ಕ್ಷಮೆಯಾಚಿಸುವುದನ್ನು ಬಳಸುತ್ತಿವೆ.
ನೀವು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಗಂಭೀರವಾದ ಕ್ಷಮೆಯಾಚನೆಯ ಟಿಪ್ಪಣಿಗಳನ್ನು ಹೊಂದಿರುವ ಹಲವಾರು ಬ್ರ್ಯಾಂಡ್‌ಗಳನ್ನು ನೀವು ಗಮನಿಸಿರಬಹುದು. ಇದು ಹಾಸ್ಯಮಯ ಮೂಲಕ ಇತ್ತೀಚಿನ ಅಂದರೆ ಹೊಸ ಕೊಡುಗೆಗಳನ್ನು ಪ್ರದರ್ಶಿಸುವ ಮೂಲಕ ಮಾರ್ಕೆಟಿಂಗ್ ಮಾಡುತ್ತಿವೆ.
#SorryNotSorry ಎಂದು ಕರೆಯಲ್ಪಡುವ ಈ ಪ್ರವೃತ್ತಿಯು ವ್ಯವಹಾರ ಕಂಪನಿಗಳು ಕ್ಷಮೆಯಾಚನೆ ಶೈಲಿಯ ಸಂದೇಶಗಳನ್ನು ಪೋಸ್ಟ್ ಮಾಡುವುದನ್ನು ಒಳಗೊಂಡಿರುತ್ತದೆ. ಆದರೆ ವಾಸ್ತವದಲ್ಲಿ, ಅವರು ತಮ್ಮ ಹೊಸ ಯೋಜನೆಗಳು, ರಿಯಾಯಿತಿ ಅಭಿಯಾನಗಳನ್ನು ಮಾಡುತ್ತಿವೆ.
ಪ್ರಸ್ತುತ #SorryNotSorry ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸುತ್ತಿರುವ ಅನೇಕ ಬ್ರ್ಯಾಂಡ್‌ಗಳು ಇರುವುದರಿಂದ, ಇದು ಟ್ರೆಂಡ್ ಆಗುತ್ತಿದೆ. ಭಾರತವು ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದ ಅತಿದೊಡ್ಡ ಬಳಕೆದಾರ ನೆಲೆಗಳಲ್ಲಿ ಒಂದನ್ನು ಹೊಂದಿದೆ. ಹೀಗಾಗಿ, ಭಾರತದಲ್ಲಿ ಈ ಟ್ರೆಂಡ್ ವೈರಲ್ ಆಗುತ್ತಿದೆ.
ಸ್ಕೋಡಾ, ಟಿ-ಸೀರೀಸ್, ವೋಕ್ಸ್‌ವ್ಯಾಗನ್ ಡೌನ್‌ಟೌನ್ ಮುಂಬೈ, ರಿಲಯನ್ಸ್ ಡಿಜಿಟಲ್, ಅದಾನಿ ಅಂಬುಜಾ ಸಿಮೆಂಟ್, ಹಲ್ದಿರಾಮ್ಸ್, ಕೆವೆಂಟರ್ಸ್, ಬನಾನಾ ಲೀಫ್, ಪಿವಿಆರ್-ಐನಾಕ್ಸ್, ಕ್ಯಾಶಿಫೈ ಮತ್ತು ಗಾರ್ನಿಯರ್ ಸೇರಿದಂತೆ ಅನೇಕರು ಈ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದಾರೆ.(ಏಜೆನ್ಸೀಸ್)