

ಲಂಡನ್: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ‘ಕೋವಿಡ್ 19’ ವೈರಸ್ಗೆ ಸರಿಯಾದ ‘ನೈಸರ್ಗಿಕ ಪೂರ್ವಿಕ ವೈರಸ್’ ಇಲ್ಲ ಎಂಬ ಸ್ಪೋಟಕ ಅಂಶವನ್ನು ಬ್ರಿಟನ್ ಸಂಶೋಧಕರ ಅಧ್ಯಯನ ವರದಿ ಪ್ರತಿಪಾದಿಸಿದೆ. ಈ ವೈರಸ್ನ್ನು ಲ್ಯಾಬ್ನಲ್ಲೇ ಅಭಿವೃದ್ಧಿಪಡಿಸಲಾಗಿದೆ ಎಂಬ ಅಂಶವನ್ನು ವರದಿ ಬೊಟ್ಟು ಮಾಡಿ ತೋರಿಸಿದೆ. ಕೋವಿಡ್ 19 ಎರಡನೇ ಅಲೆಯಿಂದ ಜಗತ್ತು ತತ್ತರಿಸಿದ ಸಂದರ್ಭದಲ್ಲೇ ಮತ್ತೊಮ್ಮೆ ವೈರಸ್ ಮೂಲ ವಿಚಾರ ಮುನ್ನೆಲೆಗೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಮತ್ತೊಂದು ಪಾರದರ್ಶಕ ಮತ್ತು ವಿಸõತ ತನಿಖೆ ನಡೆಯಬೇಕೆಂಬ ಜಾಗತಿಕ ಒತ್ತಡವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲೇ ಬ್ರಿಟನ್ನ ಈ ಅಧ್ಯಯನ ವರದಿ ಸಂಚಲನ ಮೂಡಿಸಿದೆ.
ನೋವೆಲ್ ಕರೊನಾ ವೈರಸ್ ’ಖಅಖಇಟ್ಖ’ ಅನ್ನು ವುಹಾನ್ನ ಲ್ಯಾಬ್ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ‘ಗೇನ್ ಆಫ್ ಫಂಕ್ಷನ್’ ಪ್ರಾಜೆಕ್ಟ್ ಗಾಗಿ ಕೆಲಸ ಮಾಡುತ್ತಿದ್ದ ಚೀನಾದ ವಿಜ್ಞಾನಿಗಳು ಬಾವಲಿಯಿಂದ ವೈರಸ್ ಸಂಗ್ರಹಿಸಿ ರಿವರ್ಸ್ ಇಂಜಿನಿಯರಿಂಗ್ ಮಾದರಿಯಲ್ಲಿ ವೈರಸ್ ಸಂಗ್ರಹಿಸಲಾಗಿದೆ ಎಂದು ಹೇಳಿ ತಪು್ಪ ಮುಚ್ಚಲು ಪ್ರಯತ್ನಿಸಿದ್ದಾರೆ. ವಾಸ್ತವದಲ್ಲಿ ’ಖಅಖಇಟ್ಖ’ ವೈರಸ್ಗೆ ಸರಿಯಾದ ನೈಸರ್ಗಿಕ ಪೂರ್ವಿಕ ವೈರಸ್ ಇಲ್ಲ. ಕೋವಿಡ್ 19 ಸೋಂಕು ಹರಡಲಾರಂಭಿಸಿದ ಕೂಡಲೇ ಇದಕ್ಕೆ ಸಂಬಂಧಿಸಿದ ವೈರಸ್ಗಳ ಮಾದರಿಯನ್ನು ಲ್ಯಾಬ್ನಲ್ಲಿ ‘ರೆಟ್ರೋ ಇಂಜಿನಿಯರಿಂಗ್’ ಮೂಲಕ ಮಾರ್ಪಡಿಸಿರುವ ಸಾಧ್ಯತೆ ಇದೆ. ಆ ಮೂಲಕ ಅದು ಬಾವಲಿಯಿಂದ ತೆಗೆದ ವೈರಸ್ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಭಾನುವಾರ ಪ್ರಕಟವಾದ ಅಧ್ಯಯನ ವರದಿ ಸ್ಪಷ್ಟಪಡಿಸಿದೆ.
ಬ್ರಿಟಿಷ್ ಪ್ರೊಫೆಸರ್ ಆನ್ಗಸ್ ಡಲ್ಗ್ಲೇಯಿಷ್ ಮತ್ತು ನಾರ್ವೆಯ ವಿಜ್ಞಾನಿ ಡಾ. ಬ್ರಿಗರ್ ರೊರೆನ್ಸೆನ್ ಅವರು ಸಿದ್ಧಪಡಿಸಿದ 22 ಪುಟಗಳ ಸಂಶೋಧನಾ ಪ್ರಬಂಧ ಸೈಂಟಿಫಿಕ್ ಜರ್ನಲ್ ಕ್ವಾರ್ಟರ್ಲಿ ರಿವ್ಯೂವ್ ಆಫ್ ಬಯೋಫಿಸಿಕ್ಸ್ ಡಿಸ್ಕವರಿಯಲ್ಲಿ ಇದು ಪ್ರಕಟವಾಗಿದೆ.
ಚೀನಾ ಸತ್ಯ ಒಪ್ಪಿಕೊಳ್ಳುವ ಸಮಯ ಬಂದಿದೆ!
ಡೇಲಿ ಮೇಲ್ ಪತ್ರಿಕೆ ತನಿಖಾ ವರದಿ ಪ್ರಕಟಿಸಿದ್ದು, ಹಲವು ದಾಖಲೆಗಳನ್ನು ಪ್ರಸ್ತುತಪಡಿಸಿದೆ. ಚೀನಾದಲ್ಲಿ ಕೋವಿಡ್ 19 ಸೋಂಕು ಹರಡುವುದಕ್ಕೆ ಮುನ್ನವೇ ಅಲ್ಲಿ ಮೊದಲ ರೋಗಿ ಹೆಸರು ಚೀನಾದ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಚೀನಾ ಜಗತ್ತಿನೆದುರು ಸತ್ಯವನ್ನು ಒಪ್ಪಿಕೊಳ್ಳಬೇಕಾದ ಸಮಯ ಬಂದಿದೆ. ಸೋಂಕಿನ ಮೂಲ, ವೈರಸ್ನ ಉದಯ ಹೇಗಾಯಿತೆಂಬ ವಿವರವನ್ನು ಚೀನಾ ಇನ್ನು ಬಹಳದಿನ ಮುಚ್ಚಿಡಲಾಗದು ಎಂದು ಬ್ರಿಟನ್ನ ಕಾಮನ್ಸ್ನ ಫಾರಿನ್ ಅಫೇರ್ಸ್ ಕಮಿಟಿ ಮುಖ್ಯಸ್ಥ ಟಾಮ್ ತುಗೆನ್ಧಾಟ್ ಹೇಳಿದ್ದಾರೆ.